ಹೊಸದಿಗಂತ ಡಿಜಿಟಲ್ ಡೆಸ್ಕ್:
ಅರುಣಾಚಲ ಪ್ರದೇಶದ ತವಾಂಗ್ ಸೆಕ್ಟರ್ ನಲ್ಲಿ ಚೀನಾ ಹಾಗೂ ಭಾರತೀಯ ಸೇನಾಪಡೆಯ ನಡುವೆ ನಡೆದ ಘರ್ಷಣೆ ಬಳಿಕ ಪೂರ್ವ ಸೇನಾ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಆರ್ಪಿ ಕಲಿತಾ ಮಾತನಾಡಿದ್ದು, ಉತ್ತರ ಗಡಿ ಭಾಗದ ಪ್ರದೇಶಗಳ ಪರಿಸ್ಥಿತಿ ಸ್ಥಿರವಾಗಿದೆ ಎಂದು ಶುಕ್ರವಾರ ಹೇಳಿದ್ದಾರೆ.
ವಾಸ್ತವಿಕ ನಿಯಂತ್ರಣ ರೇಖೆಯ ಕುರಿತು ಭಾರತೀಯ ಸೇನೆ ಮತ್ತು ಚೀನಾದ ಪಿಎಲ್ಎಯಿಂದ ವಿಭಿನ್ನ ಗ್ರಹಿಕೆಗಳಿವೆ. ತವಾಂಗ್ ಸೆಕ್ಟರ್ನಲ್ಲಿರುವ ಹಲವು ಪ್ರದೇಶಗಳ ಪೈಕಿ ಒಂದರಲ್ಲಿ ಚೀನಾ ನಿಯಮ ಉಲ್ಲಂಘಿಸಿತು. ಇದನ್ನು ಭಾರತೀಯ ಸೇನಾಪಡೆ ದಿಟ್ಟವಾಗಿ ಎದುರಿಸಿದರು ಎಂದು ಹೇಳಿದರು.
ದ್ವಿಪಕ್ಷೀಯ ಕಾರ್ಯವಿಧಾನಗಳು ಮತ್ತು ಪ್ರೋಟೋಕಾಲ್ಗಳನ್ನು ಅನುಸರಿಸಿ ಪರಿಸ್ಥಿತಿ ತಿಳಿಗೊಳಿಸಲಾಯಿತು. ಘರ್ಷಣೆ ಯಿಂದ ಉಭಯ ರಾಷ್ಟ್ರಗಳ ಸೇನೆಯ ಕೆಲವು ಯೋಧರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.
ಬುಮ್ಲಾದಲ್ಲಿ ನಿಯೋಗ ಮಟ್ಟದಲ್ಲಿ ಧ್ವಜ ಸಭೆ ನಡೆಸಲಾಯಿತು. ಮಾತುಕತೆ ಮೂಲಕ ಸಮಸ್ಯೆಯನ್ನು ಪರಿಹರಿಸಲಾಗಿದೆ ಎಂದಿದ್ದಾರೆ.