ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಎಐಐಎಂಎಸ್) ಸೈಬರ್ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ʼಇಂಟರ್ಪೋಲ್ʼ ಏಜೆನ್ಸಿಯ ಮೂಲಕ ಚೀನಾದ ಹ್ಯಾಕರ್ಗಳ ಬಗ್ಗೆ ಮಾಹಿತಿ ಕಲೆಹಾಕಲು ದೆಹಲಿ ಪೊಲೀಸರು ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಸಿಬಿಐ) ಗೆ ಪತ್ರ ಬರೆದಿದ್ದಾರೆ. ಇಂಟರ್ಪೋಲ್ನ ಸಂಪರ್ಕಕ್ಕೆ ಸಿಬಿಐ ನೋಡಲ್ ಏಜೆನ್ಸಿಯಾಗಿದೆ.
ಎಐಐಎಂಎಸ್ನ ಡಿಜಿಟಲ್ ಸೇವೆಗಳನ್ನು ಹ್ಯಾಕ್ ಮಾಡಿದ ಸೈಬರ್ ಕ್ರಿಮಿನಲ್ಗಳು ರೋಗಿಗಳ ಅಂಕಿಅಂಶಗಳು ಮತ್ತು ಮಾಹಿತಿಯನ್ನು ಕಲೆ ಹಾಕಿದ್ದು ಕ್ರಿಪ್ಟೋಕರೆನ್ಸಿಯಲ್ಲಿ ಅಂದಾಜು 200 ಕೋಟಿ ರೂ. ಬೇಡಿಕೆ ಇಟ್ಟಿದ್ದರು. ಇದರ ಪರಿಣಾಮ ದೇಶದ ಪ್ರಮುಖ ಸಂಸ್ಥೆಯ ಸರ್ವರ್ಗಳು ಹಲವಾರು ದಿನಗಳವರೆಗೆ ಸ್ಥಗಿತಗೊಂಡಿದ್ದು, ಹೊರರೋಗಿ ವಿಭಾಗ (OPD) ಮತ್ತು ಮಾದರಿ ಸಂಗ್ರಹಣೆ ಸೇವೆಗಳ ಮೇಲೆ ಪರಿಣಾಮ ಬೀರಿತ್ತು ಎನ್ನಲಾಗಿದೆ.
ಕೇಂದ್ರ ಏಜೆನ್ಸಿಗೆ ಬರೆದ ಪತ್ರದಲ್ಲಿ ದೆಹಲಿ ಪೊಲೀಸರು ಈ ಐಪಿ ವಿಳಾಸಗಳನ್ನು ಕಂಪನಿ ಅಥವಾ ವ್ಯಕ್ತಿ ಬಳಸುತ್ತಿದ್ದಾರೆಯೇ ಎಂಬ ಬಗ್ಗೆ ಮಾಹಿತಿ ಕೇಳಿದ್ದಾರೆ. ಜೊತೆಗೆ ಚೀನಾದಲ್ಲಿ ಇಂಟರ್ನೆಟ್ ಒದಗಿಸುವ ಕಂಪನಿಯ ಬಗ್ಗೆಯೂ ಮಾಹಿತಿಯನ್ನು ಕೇಳಲಾಗಿದೆ. ಇಂಟೆಲಿಜೆನ್ಸ್ ಫ್ಯೂಷನ್ ಮತ್ತು ಸ್ಟ್ರಾಟೆಜಿಕ್ ಆಪರೇಷನ್ಸ್ (ಐಎಫ್ಎಸ್ಒ)ಯು ಸಿಬಿಐಗೆ ಪತ್ರ ಬರೆದಿದ್ದು, ಸೈಬರ್ ದಾಳಿ ನಡೆಸಲು ಬಳಸಲಾದ ಚೀನಾ ಮತ್ತು ಹಾಂಗ್ ಕಾಂಗ್ನ ಹೆನಾನ್ನ ಇಮೇಲ್ ಐಡಿಗಳ ಐಪಿ ವಿಳಾಸಗಳ ಬಗ್ಗೆ ಇಂಟರ್ಪೋಲ್ನಿಂದ ವಿವರಗಳನ್ನು ಪಡೆಯುವಂತೆ ಕೇಳಿ ನೋಡಲ್ ಏಜೆನ್ಸಿ ಅವರಿಗೆ ಪತ್ರ ಬರೆಯಲಾಗಿದೆ ಎಂದು ದೆಹಲಿ ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.