ಹೊಸದಿಗಂತ ಡಿಜಿಟಲ್ ಡೆಸ್ಕ್:
ವಯಸ್ಸಾಗಿರೋ ಒಂದು ಕತ್ತೆ ಅಚಾನಕ್ಕಾಗಿ ಹಾಳು ಬಾವಿಗೆ ಬಿದ್ದು ಬಿಡುತ್ತೆ. ಎಷ್ಟೇ ಟ್ರೈ ಮಾಡಿದ್ರು ಮೇಲೆ ಬರೋಕೆ ಸಾಧ್ಯನೇ ಆಗಿರಲ್ಲ. ಆ ಊರಿನವರೆಲ್ಲ ಎಷ್ಟೇ ಟ್ರೈ ಮಾಡಿದ್ರು ಏನು ಮಾಡೋಕೆ ಆಗಿರಲಿಲ್ಲ. ಕೊನೆಗೆ ಊರಿನ ಜನರೆಲ್ಲ ಸೇರಿ ಹೇಗಿದ್ರು ಕತ್ತೆಗೆ ವಯಸ್ಸಾಗಿದೆ ಹೀಗಾಗಿ ಆ ಹಾಳು ಬಾವಿಗೆ ಮಣ್ಣು ಹಾಕಿ ಕತ್ತೆಯನ್ನು ಕೂಡ ಮುಚ್ಚಿ ಹಾಕೋಣ ಅಂತ ನಿರ್ಧಾರ ಮಾಡುತ್ತಾರೆ.
ಎಲ್ಲರು ಹಾರೆ, ಬುಟ್ಟಿ ತಂದು ಮಣ್ಣು ಅಗೆದು, ಆ ಹಾಳು ಬಾವಿಯನ್ನು ತುಂಬಿಸೋಕೆ ಶುರು ಮಾಡ್ತಾರೆ. ಕತ್ತೆಗೆ ಏನೂ ಅರ್ಥನೇ ಆಗೋದಿಲ್ಲ. ಅದಕ್ಕೂ ಬೇರೆ ದಾರಿ ಕಾಣದೆ ಮಣ್ಣು ಹಾಕೋದನ್ನೇ ಸುಮ್ಮ್ನೆ ನಿಂತು ನೋಡುತ್ತೆ. ಪ್ರತಿ ಸಲ ಮಣ್ಣು ಹಾಕೋವಾಗ ಕತ್ತೆ ಆ ಮಣ್ಣಿನ ಮೇಲ್ಗಡೆ ಬಂದು ನಿಂತುಕೊಳ್ಳುತ್ತೆ. ಪ್ರತಿ ಬಾರಿಯೂ ಇದೆ ರೀತಿ ಆದಾಗ ಕತ್ತೆ ಕೂಡ ಮಣ್ಣಿನ ಮೇಲೆ ಮೇಲೆ ಹತ್ತಿ ಬಾವಿಯ ಮೇಲ್ಗಡೆ ಬಂದು ಹೊರಹೋಗಿ ಬಿಡುತ್ತೆ.
ಈ ಕಥೆಯಿಂದ ನಾವು ತಿಳ್ಕೊಬೇಕಾಗಿರೋದು ಏನಂದ್ರೆ ನಮ್ಮ ಜೀವನದಲ್ಲೂ ಕೂಡ ನಾವು ಮಾಡೋ ಕೆಲಸಕ್ಕೆ ನಮ್ಮನ್ನ ಡಿಮೋಟಿವೇಟ್ ಮಾಡೋಕೆ ಜನ ಕಾಯ್ತಿರುತ್ತಾರೆ. ಆದ್ರೆ ನಾವು ಅರ್ಥ ಮಾಡಿಕೊಳ್ಳಬೇಕು ಅವರ ಮಾತಿನಿಂದ ನಾವು ಡೀಮೋಟಿವೇಟ್ ಆಗ್ಬೇಕಾ ಅಥವಾ ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ಬೆಳಿಬೇಕಾ ಅಂತ.

