ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿನಿಮಾ ಬಿಡುಗಡೆಯ ದಿನ ಇನ್ನೂ ದೂರವಿದ್ದರೂ, ತೆಲುಗು ಚಿತ್ರರಂಗದ ಕುತೂಹಲಲ್ಲಿ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಅದರಲ್ಲೂ ಮಾಸ್ ನಾಯಕನೊಬ್ಬರ ಸಿನಿಮಾ ಎಂದರೆ ಕ್ರೇಜ್ ಜಾಸ್ತಿ ಇರುವುದು ಸಹಜ. ನಟ ನಂದಮೂರಿ ಬಾಲಕೃಷ್ಣ ಅಭಿನಯದ ಬಹುನಿರೀಕ್ಷಿತ ಸಿನಿಮಾ ಅಖಂಡ 2 ವಿದೇಶಗಳಲ್ಲಿ ಈಗಿನಿಂದಲೇ ಸಂಚಲನಕ್ಕೆ ಕಾರಣವಾಗಿದೆ. ಡಿಸೆಂಬರ್ 5ರಂದು ಜಗತ್ತಿನಾದ್ಯಂತ ಬಿಡುಗಡೆಯಾಗಲಿರುವ ಈ ಚಿತ್ರಕ್ಕೆ ಮುಂಗಡ ಟಿಕೆಟ್‌ಗಳಿಗೇ ಭಾರೀ ಬೇಡಿಕೆ ಕಂಡುಬಂದಿದೆ.
ಜರ್ಮನಿಯ ಫ್ರಾಂಕ್‌ಫರ್ಟ್ ನಗರದಲ್ಲಿ ನಡೆಯಲಿರುವ ವಿಶೇಷ ಪ್ರದರ್ಶನಕ್ಕಾಗಿ ಬಾಲಯ್ಯ ಅಭಿಮಾನಿಯೊಬ್ಬರು ಒಂದೇ ಟಿಕೆಟ್‌ಗೆ ಸುಮಾರು ರೂ.2 ಲಕ್ಷ ವೆಚ್ಚ ಮಾಡಿ ಖರೀದಿಸಿದ್ದಾರಂತೆ. ಈ ದುಬಾರಿ ಟಿಕೆಟ್ ಖರೀದಿಯ ಮಾಹಿತಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಅಭಿಮಾನಿಗಳ ನಡುವೆ ಹೊಸದೊಂದು ಉತ್ಸಾಹವನ್ನು ಮೂಡಿಸಿದೆ. ಇನ್ನೊಂದು ವರದಿಯ ಪ್ರಕಾರ, ಟಿಕೆಟ್‌ಗಾಗಿ ಮತ್ತೊಬ್ಬ ಪ್ರೇಕ್ಷಕ ಸುಮಾರು ರೂ.1 ಲಕ್ಷಕ್ಕೂ ಅಧಿಕ ಮೊತ್ತ ನೀಡಿ ಹರಾಜಿನಲ್ಲಿ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.
ಈ ಚಿತ್ರದಲ್ಲಿ ಬಾಲಕೃಷ್ಣ ಅಖಂಡನಾಗಿ ಶಕ್ತಿಶಾಲಿ, ಅಧ್ಯಾತ್ಮಿಕ ಹಿನ್ನೆಲೆಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರಕ್ಕೆ ನಿರ್ದೇಶನವನ್ನು ಬೋಯಪತಿ ಶ್ರೀನು ವಹಿಸಿದ್ದು, ನಾಯಕಿಯಾಗಿ ಸಂಯುಕ್ತಾ ಮೆನನ್ ನಟಿಸಿದ್ದಾರೆ. ಆದಿ ಪಿನಿಸೆಟ್ಟಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. 3D ತಂತ್ರಜ್ಞಾನದಲ್ಲಿ ಬಹುಭಾಷೆಗಳಲ್ಲಿ ಬಿಡುಗಡೆಯಾಗುತ್ತಿರುವ ‘ಅಖಂಡ 2’ ಮೇಲಿನ ನಿರೀಕ್ಷೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಬಾಲಯ್ಯ ಕ್ರೇಜ್ ದೇಶ-ವಿದೇಶಗಳಲ್ಲಿ ಹೆಚ್ಚುತ್ತಲೇ ಇದೆ.

