Wednesday, December 3, 2025

ಸುಳ್ಳು ಸುದ್ದಿ ಹರಡಿ ಮಕ್ಕಳಲ್ಲಿ ಗೊಂದಲ ಮೂಡಿಸಿದ್ರೆ ಹುಷಾರ್‌: ಮಧು ಬಂಗಾರಪ್ಪ ಎಚ್ಚರಿಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಎಸ್​ಎಸ್ಎಲ್​ಸಿ, ಪಿಯುಸಿ ವಿದ್ಯಾರ್ಥಿಗಳಿಗೆ ಮೂರನೇ ಪರೀಕ್ಷೆ ನಡೆಸುವುದನ್ನು ಕೈಬಿಡಲಾಗಿದೆ ಎಂಬ ಸುದ್ದಿ ಕೆಲವು ಮಾಧ್ಯಮದಲ್ಲಿ ಪ್ರಕಟಿಸಿದ್ದವು.

ಈ ಕುರಿತು ಸ್ಪಷ್ಟನೆ ನೀಡಿರುವ ಶಿಕ್ಷಣ ಸಚಿವ ಮಧು ಬಂಗಾರಪ್ಪ,  ಕಳೆದ ವರ್ಷದಂತೆ ಈ ವರ್ಷವೂ SSLC-PUC ಗೆ ಮೂರು ಪರೀಕ್ಷೆ ನಡೆಸುತ್ತೇವೆಂದು ಹೇಳಿದ್ದಾರೆ. ಅಷ್ಟೇ ಅಲ್ಲದೇ ಈ ಕುರಿತು ಸುಳ್ಳು ಸುದ್ದಿ ಹಬ್ಬಿಸಿ ಗೊಂದಲ ಸೃಷ್ಟಿಸುವವರಿಗೆಎಚ್ಚರಿಕೆ ನೀಡಿದ್ದಾರೆ.

ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಉತ್ತೀರ್ಣ ಅಂಕಗಳನ್ನು ಶೇ.35 ರಿಂದ ಶೇ.33ಕ್ಕೆ ಇಳಿಸಿದ ಶಿಕ್ಷಣ ಇಲಾಖೆ, ಇದೀಗ ಪರೀಕ್ಷಾ ವಿಧಾನದಲ್ಲಿಯೂ ಮಾರ್ಪಾಡು ಮಾಡಿದೆ ಎಂದು ಹಲವು ಮಾಧ್ಯಮಗಳು ವರದಿ ಮಾಡಿದ್ದವು. ಈ ಸುಳ್ಳು ಸುದ್ದಿಯಿಂದ ಕೆಂಡಾಮಂಡಲವಾಗಿರುವ ಮಧು ಬಂಗಾರಪ್ಪ, ಪರೀಕ್ಷಾ ವಿಧಾನದಲ್ಲಿ ಬದಲಾವಣೆ ಇಲ್ಲ. ವಿದ್ಯಾರ್ಥಿಗಳಿಗೆ ಯಾವುದೇ ಗೊಂದಲ ಬೇಡ. ಈ ವರ್ಷವೂ ಮೂರು ಎಕ್ಸ್ಂ ಮಾಡಲ್ ಇದ್ದೆ ಇರುತ್ತೆ ಎಂದು ಹೇಳಿದ್ದಾರೆ.

error: Content is protected !!