September 18, 2026
Friday, September 18, 2026
spot_img

ಮದ್ಯಪ್ರಾಚ್ಯದಲ್ಲಿ ಯುದ್ಧ ಕಾರ್ಮೋಡ: ಅಡುಗೆ ಎಣ್ಣೆ ಬೆಲೆ ಭಾರೀ ಏರಿಕೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮದ್ಯ ಪ್ರಾಚ್ಯದಲ್ಲಿನ ಯುದ್ಧ ಕಾರ್ಮೋಡದಿಂದಾಗಿ ದಿನನಿತ್ಯ ಬಳಕೆ ವಸ್ತುಗಳ ಬೆಲೆಯಲ್ಲಿ ಅಲ್ಪ ಪ್ರಮಾಣದ ಏರಿಕೆಯಾಗುತ್ತಿದ್ದು, ಗೃಹ ಬಳಕೆ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ ಗ್ರಾಹಕರಿಗೆ ಹೆಚ್ಚುವರಿ ಹೊರೆಗಿದ್ದು, ಇದರ ನಡುವೆ ಅಡುಗೆ ಎಣ್ಣೆ ಬೆಲೆಯೂ ಏರಿಕೆ ಆಗಿದೆ.

ಅಡುಗೆ ಎಣ್ಣೆ ಪೂರೈಕೆಯಲ್ಲಿ ವ್ಯತ್ಯಾಸವಾಗಿದ್ದು, ಹೀಗಾಗಿ ಲೀಟರ್‌ಗೆ 8 ರಿಂದ 10 ರೂ. ಏರಿಕೆಯಾಗಿದೆ.

ಸನ್ ಪ್ಲವರ್ ಎಣ್ಣೆಯ ಬೆಲೆ 163 ರಿಂದ 173 ರೂ.ಗೆ ಏರಿಕೆಯಾಗಿದ್ದು,ಗೋಲ್ಡ್ ವಿನ್ನರ್ ಬೆಲೆ 161 ರಿಂದ 169 ರೂ. ಗೆ ಹೆಚ್ಚಾಗಿದೆ. ಇನ್ನು ಫಾರ್ಚೂನ್ ಆಯಿಲ್ – 152 ರಿಂದ 160 ರೂ., ಪ್ರೀಡಂ ಆಯಿಲ್ – 160 ರಿಂದ 168 ರೂ., ರುಚಿ ಗೋಲ್ಡ್ – 120 ರಿಂದ 135 ರೂ.ರಷ್ಟು ಅಧಿಕವಾಗಿದೆ.

ಅದೇ ರೀತಿ ದೀಪದ ಎಣ್ಣೆಯಲ್ಲೂ ದರ ಹೆಚ್ಚಾಗಿದ್ದು, ಗ್ರಾಹಕರಿಗೆ ಹೆಚ್ಚುವರಿ ಹೊರೆಯಾಗುತ್ತಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !