Wednesday, December 3, 2025

ಐಸಿಸಿ ಏಕದಿನ ಶ್ರೇಯಾಂಕದಲ್ಲಿ ಕೊಹ್ಲಿಗೆ ಏರಿಕೆ: ರೋಹಿತ್ ಗೆ ಅಗ್ರಸ್ಥಾನ ಭದ್ರ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಂತಾರಾಷ್ಟ್ರೀಯ ಕ್ರಿಕೆಟ್ ವಲಯದಲ್ಲಿ ಬುಧವಾರ ಬಿಡುಗಡೆಗೊಂಡ ಇತ್ತೀಚಿನ ಶ್ರೇಯಾಂಕ ಪಟ್ಟಿ ಮತ್ತೊಂದು ಕುತೂಹಲ ಕೆರಳಿಸಿದೆ. ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಪ್ರಕಟಿಸಿದ ಪುರುಷರ ಆಟಗಾರರ ಏಕದಿನ ಪಟ್ಟಿಯಲ್ಲಿ ಭಾರತದ ಅನುಭವಿ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಒಂದು ಸ್ಥಾನ ಮೇಲೇರಿದ್ದಾರೆ.

ಗಾಯದ ಕಾರಣದಿಂದ ಹೊರಗುಳಿದಿರುವ ಶುಭಮನ್ ಗಿಲ್ ಅವರನ್ನು ಹಿಂದಿಕ್ಕಿ ಕೊಹ್ಲಿ ಐದನೇ ಸ್ಥಾನಕ್ಕೆ ಏರಿರುವುದು ಅಭಿಮಾನಿಗಳಿಗೆ ಖುಷಿಯಾಗಿದೆ. 751 ರೇಟಿಂಗ್ ಅಂಕಗಳನ್ನು ಹೊಂದಿರುವ ಕೊಹ್ಲಿ ಅಗ್ರಸ್ಥಾನಕ್ಕೇರುವತ್ತ ವೇಗವಾಗಿ ಸಾಗುತ್ತಿದ್ದಾರೆ. ರಾಂಚಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಆಡಿದ ಮೊದಲ ಏಕದಿನ ಪಂದ್ಯದಲ್ಲಿ ಅವರು 120 ಎಸೆತಗಳಲ್ಲಿ 135 ರನ್‌ಗಳ ಸ್ಫೋಟಕ ಶತಕ ಬಾರಿಸಿದ್ದರು.

ಪಟ್ಟಿಯಲ್ಲಿ ರೋಹಿತ್ ಶರ್ಮಾ 783 ಅಂಕಗಳೊಂದಿಗೆ ನಂಬರ್ ಒನ್ ಸ್ಥಾನವನ್ನು ಕಾಯ್ದುಕೊಂಡಿದ್ದಾರೆ. ಎರಡನೇ ಸ್ಥಾನಕ್ಕೆ ಡೇರಿಲ್ ಮಿಚೆಲ್, ಮೂರನೇ ಸ್ಥಾನಕ್ಕೆ ಇಬ್ರಾಹಿಂ ಜದ್ರಾನ್ ಏರಿದ್ದಾರೆ.

ಬೌಲಿಂಗ್ ವಿಭಾಗದಲ್ಲೂ ಭಾರತಕ್ಕೆ ಸಂತಸದ ಸುದ್ದಿ ದೊರೆತಿದೆ. ಕುಲದೀಪ್ ಯಾದವ್ ಒಂದು ಸ್ಥಾನ ಏರಿಕೆ ಕಂಡು ಆರನೇ ಸ್ಥಾನಕ್ಕೇರಿದ್ದಾರೆ. ಅಗ್ರ ಐದು ಸ್ಥಾನಗಳಲ್ಲಿ ರಶೀದ್ ಖಾನ್, ಜೋಫ್ರಾ ಆರ್ಚರ್, ಕೇಶವ್ ಮಹಾರಾಜ್ ಹಾಗೂ ಮತೀಶ್ ತೀಕ್ಷಣ ಇದ್ದಾರೆ. ಟೆಸ್ಟ್ ಬೌಲರ್‌ಗಳಲ್ಲಿ ಭಾರತದ ಜಸ್ಪ್ರೀತ್ ಬುಮ್ರಾ ಅಗ್ರಸ್ಥಾನ ಭದ್ರಪಡಿಸಿಕೊಂಡಿದ್ದಾರೆ.

error: Content is protected !!