ಹೊಸದಿಗಂತ ಡಿಜಿಟಲ್ ಡೆಸ್ಕ್
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಬಯೋಪಿಕ್ ತಯಾರಿ ಬಲು ಜೋರಾಗಿ ನಡೆಯುತ್ತಿದ್ದು, ವಾಜಪೇಯಿ ಪಾತ್ರದಲ್ಲಿ ಪಂಕಜ್ ತ್ರಿಪಾಠಿ ನಟಿಸಿದ್ದಾರೆ.
ಇಂದು ವಾಜಪೇಯಿ ಅವರ ಜನ್ಮ ದಿನದ ಪ್ರಯುಕ್ತ ಚಿತ್ರದ ಫಸ್ಟ್ ಲುಕ್ ರಿವೀಲ್ ಮಾಡಲಾಗಿದೆ.
ತಮ್ಮದೇ ಶೈಲಿಯಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರ ವ್ಯಕ್ತಿತ್ವ ಕೋಟ್ಯಂತರ ಜನರಿಗೆ ಮಾದರಿ. ಅವರ ಜೀವನಾಧಾರಿತ ಸಿನಿಮಾ ವಾಜಪೇಯಿ ಪಾತ್ರಕ್ಕೆ ನಟ ಪಂಕಜ್ ತ್ರಿಪಾಠಿ ಜೀವತುಂಬಿದ್ದಾರೆ.
`ಮೈ ಅಟಲ್ ಹು’ ಸಿನಿಮಾದಲ್ಲಿ ತೋರಿಸುವ ಅವರ ಜೀವನದ ಹಲವು ಅಂಶಗಳನ್ನು ತೋರಿಸಲು ಪ್ರಯತ್ನ ಮಾಡಲಾಗುತ್ತಿದೆ. ಇದನ್ನು ತಿಳಿಸುವ ಸಲುವಾಗಿ ಚಿಕ್ಕ ಟೀಸರ್ ರಿಲೀಸ್ ಮಾಡಲಾಗಿದೆ.
`ಮೈ ಅಟಲ್ ಹು’ ಸಿನಿಮಾಗೆ ರವಿ ಜಾಧವ್ ನಿರ್ದೇಶನ ಮಾಡಿದ್ದಾರೆ. ಸದ್ಯ ಚಿತ್ರದಲ್ಲಿನ ಪಂಕಜ್ ತ್ರಿಪಾಠಿ ಲುಕ್ ನೆಟ್ಟಿಗರ ಗಮನ ಸೆಳೆದಿದೆ. ಇನ್ನೂ ಈ ಸಿನಿಮಾ ಮುಂದಿನ ವರ್ಷ ಡಿ.25ಕ್ಕೆ ತೆರೆಗೆ ಅಪ್ಪಳಿಸಲಿದೆ.