ಹೊಸದಿಗಂತ ಡಿಜಿಟಲ್ ಡೆಸ್ಕ್, ವಿಜಯಪುರ:
ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದಲ್ಲಿ ನಡೆಯುತ್ತಿರುವ 16ನೇ ಮಹಿಳಾ ಮಹಾವಿದ್ಯಾಲಯಗಳ ಅಥ್ಲೇಟಿಕ್ಸ್ ಕ್ರೀಡಾಕೂಟ-2022ರಲ್ಲಿ ಮಹಿಳಾ ವಿವಿಯ ಕ್ರೀಡಾಪಟು ಜ್ಯೋತಿ ಅವಟಿ ಉದ್ದ ಜಿಗಿತ ಸ್ಪರ್ಧೆಯಲ್ಲಿ ಹೊಸ ದಾಖಲೆ ಬರೆದಿದ್ದಾರೆ.
ಮಹಿಳಾ ವಿಶ್ವವಿದ್ಯಾಲಯ 2018-19ನೇ ಸಾಲಿನ ಹಮ್ಮಿಕೊಂಡ ಕ್ರೀಡಾಕೂಟದಲ್ಲಿ ಉದ್ದ ಜಿಗಿತ ಸ್ಪರ್ಧೆಯಲ್ಲಿ 4.85 ಮೀಟರ್ ಉದ್ದ ಜಿಗಿತ ದಾಖಲೆಯಾಗಿತ್ತು. ಆದರೆ ಇಂದು ಜ್ಯೋತಿ ಅವಟಿ 4.91 ಮೀಟರ್ ಉದ್ದ ಜಿಗಿದು ಹೊಸ ದಾಖಲೆ ಸೃಷ್ಟಿಸಿದರು.
ಕೊಪ್ಪಳದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಮಹಾವಿದ್ಯಾಲಯದ ವಿದ್ಯಾರ್ಥಿನಿ ಶಿವನಂದಿ ಬಿ.ಎಮ್ ದ್ವಿತಿಯ ಸ್ಥಾನ, ಮುಧೋಳದ ಬಿವಿವಿಎಸ್ ದಾನಮ್ಮ ದೇವಿ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಮಹಿಳಾ ಮಹಾವಿದ್ಯಾಲಯದ ಕಾವ್ಯಾ ಹನುಮಂತ ಪೂಜಾರಿ ತೃತಿಯ ಸ್ಥಾನ ಪಡೆದುಕೊಂಡಿದ್ದಾರೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ