VIRAL VIDEO| ಏನಪ್ಪಾ ಬುಲೆಟ್‌ ಹಾಕೋಕು ಬರಲ್ವಾ? ಎಸ್‌ಐ ಹೆಂಗಾದ್ಯಪ್ಪ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಉತ್ತರ ಪ್ರದೇಶದ ಸಂತ ಕಬೀರ್ ನಗರ ಜಿಲ್ಲೆಯ ಪೊಲೀಸ್ ಠಾಣೆಯಲ್ಲಿ ಎಸ್ಪಿ ಖಲೀಲಾಬಾದ್ ತಪಾಸಣೆ ನಡೆಸಿದರು. ಇದರ ಭಾಗವಾಗಿ ಆ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಬ್ ಇನ್ಸ್ ಪೆಕ್ಟರ್ ಗೆ ಗನ್ ನೀಡಿ ಗನ್ ಲೋಡ್ ಮಾಡುವಂತೆ ಹೇಳಿದ್ದರು. ಆತನಿಗೆ ಗನ್ ನಲ್ಲಿ ಬುಲೆಟ್ ಲೋಡ್ ಮಾಡುವುದು ಹೇಗೆ ಎಂಬುದೇ ಮರೆತು ಎಲ್ಲಿಗೆ ಲೋಡ್ ಮಾಡಬೇಕೆಂದು ತಿಳಿಯದೆ ಕಕ್ಕಾಬಿಕ್ಕಿಯಾದ. ಎಸ್‌ಪಿ ಶಾಟ್ ಗನ್ ಅನ್ನು ಎಸ್ಎಐಗೆ ನೀಡಿ ಗುಂಡು ಹಾರಿಸಲು ಆದೇಶಿಸಿದರು. ಆದರೆ ಬುಲೆಟ್‌ ಹೇಗೆ ಹಾಕಬೇಕೆಂದು ತಿಳಿಯದೆ ಎಸ್‌ಐ ಒದ್ದಾಡುವುದನ್ನು ಕಂಡು ತಮ್ಮ ಸಹೋದ್ಯೋಗಿಗಳು ನಕ್ಕಿದ್ದಾರೆ.

ಕೊನೆಗೆ ಎಸ್ಪಿ ಕೂಡ ಸಬ್ ಇನ್ಸ್ ಪೆಕ್ಟರ್ ಸ್ಥಿತಿ ನೋಡಿ ನಕ್ಕರು. ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿದವರೆಲ್ಲಾ ಪೊಲೀಸರಿಗೆ ಬಂದೂಕಿನಿಂದ ಗುಂಡು ಹಾರಿಸುವುದೂ ತಿಳಿಯದ ಸ್ಥಿತಿಯಲ್ಲಿದ್ದಾರೆ. ಈತ ಎಸ್‌ಐ ಹೇಗಾದ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!