ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟಿ ರಶ್ಮಿಕಾ ಮಂದಣ್ಣ ಬಾಲಿವುಡ್‌ನಲ್ಲಿ ಈಗಾಗಲೇ ಎರಡು ಸಿನಿಮಾಗಳನ್ನು ಮುಗಿಸಿದ್ದಾರೆ. ಇನ್ನೂ ಹಲವು ಸಿನಿಮಾಗಳ ಶೂಟಿಂಗ್ ನಡೆಯುತ್ತಿದೆ.
ಇದೀಗ ರಶ್ಮಿಕಾಗೆ ಸ್ಟಾರ್ ಡೈರೆಕ್ಟರ್ ಸಂಜಯ್ ಲೀಲಾ ಬನ್ಸಾಲಿ ಚಾನ್ಸ್ ನೀಡಿದ್ದಾರೆ ಎನ್ನುವ ಸುದ್ದಿ ಎಲ್ಲೆಡೆ ಹರಿದಾಡ್ತಿದೆ.
ಇದಕ್ಕೆ ನಿದರ್ಶನದಂತೆ ರಶ್ಮಿಕಾ ಇತ್ತೀಚೆಗಷ್ಟೇ ಬನ್ಸಾಲಿ ಆಫೀಸ್‌ನಲ್ಲಿ ಕಾಣಿಸಿಕೊಂಡಿದ್ದರು. ಬನ್ಸಾಲಿ ನಿರ್ದೇಶನದ ಗಂಗೂಬಾಯಿ ಕಾಥಿಯಾವಾಡಿ, ಪದ್ಮಾವತ್‌ಮ ಬಾಜಿರಾವ್ ಮಸ್ತಾನಿ, ರಾಮ್‌ಲೀಲಾ ಸಿನಿಮಾಗಳು ಹಿಟ್ ಆಗಿವೆ. ಎಲ್ಲಾ ಬಾಲಿವುಡ್ ನಟ,ನಟಿಯರಿಗೂ ಬನ್ಸಾಲಿ ಗರಡಿ ಮನೆಯಲ್ಲಿ ಪಳಗುವ ಆಸೆ ಇದ್ದೇ ಇದೆ. ರಶ್ಮಿಕಾಗೆ ಈ ಚಾನ್ಸ್ ಸಿಗುತ್ತಿದ್ದು, ಸದ್ಯದಲ್ಲೇ ಸಿನಿಮಾ ಅನೌನ್ಸ್ ಆಗಲಿದೆ.