ಹೊಸದಿಗಂತ ಡಿಜಿಟಲ್ ಡೆಸ್ಕ್
ಮೇಷ
ನಿಮ್ಮ ವ್ಯವಹಾರದಲ್ಲಿ ಎಚ್ಚರಿಕೆಯಿಂದ ಹೆಜ್ಜೆಯಿಡಿ. ಪ್ರಮಾದವಾಗದಂತೆ ನೋಡಿಕೊಳ್ಳಿ. ಅತಿಯಾದ ಉತ್ಸಾಹ ಕೆಲಸ ಕೆಡಿಸಬಹುದು.
ವೃಷಭ
ನಿಮ್ಮ ಎಲ್ಲಾ ಕೆಲಸಗಳನ್ನು ಲೆಕ್ಕಾಚಾರವಿಟ್ಟೇ ಮಾಡಿರಿ. ಇಲ್ಲವಾದರೆ ಯಾವುದೇ ಫಲ ಸಿಗದು. ಸಣ್ಣ ವಿಷಯದ ಕುರಿತು ಅತಿಯಾದ ಚಿಂತನೆ ಅನಗತ್ಯ.
ಮಿಥುನ
ನಿಮ್ಮ ಪ್ರೀತಿಯ ಬದುಕಿನಲ್ಲಿ ಕೆಲವು ಸಮಸ್ಯೆಗಳು ಉದ್ಭವಿಸುತ್ತವೆ. ಅದನ್ನು ನಾಜೂಕಿನಿಂದ ಪರಿಹರಿಸಬೇಕು. ಆತುರದ ಕ್ರಮ ಸಲ್ಲದು.
ಕಟಕ
ಹೂಡಿಕೆಯಲ್ಲಿ ಲಾಭವಿದೆ. ಹಾಗಾಗಿ ಹೊಸ ವ್ಯವಹಾರಕ್ಕೆ ಹಣ ಹೂಡುವ ಬಗ್ಗೆ ಚಿಂತಿಸಬಹುದು. ಸಾಂಸಾರಿಕ ಸಮಸ್ಯೆ ಪರಿಹಾರ.
ಸಿಂಹ
ಕೆಲಸದ ಒತ್ತಡ. ಪ್ರಯಾಣ ಸಂಭವ. ಸಹೋದ್ಯೋಗಿ ಜತೆ ಸಂಘರ್ಷವಾದೀತು. ಆರ್ಥಿಕ ಲಾಭ ಸೀಮಿತ. ಅನವಶ್ಯ ವೆಚ್ಚಗಳನ್ನು ನಿಯಂತ್ರಿಸಿರಿ.
ಕನ್ಯಾ
ನಿಮ್ಮ ಸುತ್ತಲಿನ ವ್ಯಕ್ತಿಗಳ ಜತೆ ಸಮಸ್ಯೆ ತಲೆದೋರಬಹುದು. ಸಹನೆಯಿಂದ ವರ್ತಿಸುವುದು ಒಳ್ಳೆಯದು. ಆಕ್ರೋಶ ಒಳಿತು ತಾರದು.
ತುಲಾ
ಯೋಜನೆ ರೂಪಿಸಿ ಕಾರ್ಯ ಎಸಗಿದರೆ ಉತ್ತಮ ಫಲ. ಬೇಕಾಬಿಟ್ಟಿ ಧೋರಣೆ ನಿಷ್ಫಲವಾದೀತು. ಆಪ್ತರ ಜತೆ ಸಂಬಂಧ ಉಳಿಸಲು ಆದ್ಯತೆ ಕೊಡಿ.
ವೃಶ್ಚಿಕ
ಫಲಪ್ರದ ದಿನ. ವೃತ್ತಿಯಲ್ಲಿ ಯಶಸ್ಸು. ಹಣಕಾಸು ವೃದ್ಧಿ. ಪ್ರೀತಿಯ ಬದುಕು ಮತ್ತೆ ಹಳಿಗೆ ಮರಳುತ್ತದೆ. ಒಟ್ಟಿನಲ್ಲಿ ಪೂರಕ ಬೆಳವಣಿಗೆಗಳು.
ಧನು
ನಿಮಗೆ ಪೂರಕವಾದ ದಿನ. ಹೊಸತನದ ಭಾವ ಉಂಟಾಗಲಿದೆ. ನಿಮ್ಮ ಸುತ್ತಲಿನವರ ಜತೆ ಉತ್ತಮ ಬಾಂಧವ್ಯ ಕಾಯ್ದುಕೊಳ್ಳಿ. ಕೌಟುಂಬಿಕ ನೆಮ್ಮದಿ.
ಮಕರ
ನಿಮ್ಮ ವ್ಯವಹಾರದಲ್ಲಿ ಭಾವುಕತೆ ಬಿಟ್ಟುಬಿಡಿ. ಪ್ರಾಕ್ಟಿಕಲ್ ಆಗಿ ವರ್ತಿಸಿರಿ. ಇಲ್ಲವಾದರೆ ಮಾನಸಿಕ ನೋವು ತಿನ್ನುವಿರಿ. ಆಪ್ತರ ಜತೆ ಭಿನ್ನಮತ.
ಕುಂಭ
ಹಿರಿಯರ ಜತೆ ಅನವಶ್ಯ ವಾದಕ್ಕೆ ಹೋಗದಿರಿ. ನಿಮಗಾಗದ ವಿಷಯದಲ್ಲೂ ಮೌನ ಸಾಧಿಸಿರಿ. ಅದರಿಂದ ಮಾನಸಿಕ ಶಾಂತಿ ಉಳಿಸಿಕೊಳ್ಳಬಹುದು.
ಮೀನ
ವೃತ್ತಿಯಲ್ಲಿ ಯಶಸ್ಸು. ನಿಮಗೆ ಪೂರಕವಾದ ಬೆಳವಣಿಗೆ. ಹೂಡಿಕೆಯಿಂದ ಲಾಭ. ಆರೋಗ್ಯಕ್ಕೆ ಸಂಬಂಧಿಸಿಯೂ ಸಮಾಧಾನ.