Friday, December 5, 2025

ಕಥೆಯೊಂದ ಹೇಳುವೆ 6 | ಬೇರೆಯವರು ಏನ್ ಹೇಳ್ತಾರೆ ಅಂತ ತಲೆಕೆಡಿಸ್ಕೊಬಾರ್ದು! ಈ ಸರ್ ಹೇಳೋತರ ಕೇಳ್ಬೇಕು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸರ್ ನಾನು ಯಾವಾಗ್ಲೂ ಕಷ್ಟ ಪಟ್ಟು ಓದುತ್ತೇನೆ, ಆದ್ರೆ ಎಷ್ಟೇ ಓದಿದ್ರು ಫೇಲ್ ಆಗ್ತೇನೆ. ನನ್ನ ಕ್ಲಾಸ್ ಮೇಟ್ ನನ್ನ ನೋಡಿ ನಗುತ್ತಾರೆ. ಅಂತ ಒಬ್ಬ ಹುಡುಗ ತನ್ನ ಸರ್ ಹತ್ರ ಹೇಳಿ ಅಳ್ತಾನೆ.

ಆಗ ಅವನ ಸರ್ ಅವ್ನ ಕೈಗೆ ನೀರು ತುಂಬಿರೋ ಗ್ಲಾಸ್ ಕೊಟ್ಟು ‘ ಇಲ್ಲಿಂದ ನಿನ್ನ ತರಗತಿ ತನಕ ಈ ಗ್ಲಾಸ್ ಇಟ್ಕೊಂಡು ಹೋಗು. ಯಾರು ಹೇಗೆ ರಿಯಾಕ್ಟ್ ಮಾಡ್ತಾರೆ ನೋಡಿ ಹೇಳು’ ಅಂತ ಕೈಗೆ ಒಂದು ಗ್ಲಾಸ್ ಕೊಡ್ತಾರೆ. ಅವನು ಹೋಗಿ ಸ್ವಲ್ಪ ಸಮಯದ ನಂತರ ಬಂದು ಸರ್ ಹತ್ರ ಹೇಳ್ತಾನೆ ‘ಸರ್ ಕೆಲವರು ನನ್ನ ನೋಡಿ ನಗಾಡಿದ್ರು, ಕೆಲವ್ರು ನೋಡಿದ್ರು, ಇನ್ನು ಕೆಲವರು ಏನು ಹೇಳಿಲ್ಲ’ ಅಂತ ಹೇಳಿದ.

ಈಗ ಸರ್ ಅದೇ ಗ್ಲಾಸ್ ಗೆ ಮತ್ತೆ ಫುಲ್ ನೀರು ತುಂಬಿಸಿ ‘ ಈಗ ಈ ಗ್ಲಾಸ್ನಲ್ಲಿರೋ ನೀರು ಒಂದು ಚೂರು ಚೆಲ್ಲದ ಹಾಗೆ ಮತ್ತೆ ಹೋಗಿ ಬಾ’ ಅಂತ ಹೇಳ್ತಾರೆ. ಅವನು ಮತ್ತೆ ಹೋಗ್ತಾನೆ. ಈ ಸಲ ಬರಿ ಗ್ಲಾಸ್ ಮಾತ್ರ ನೋಡ್ಕೊಂಡು ನೀರು ಚೆಲ್ಲದ ಹಾಗೆ ನಿಧಾನಕ್ಕೆ ಹೋಗಿ ಬರ್ತಾನೆ.

ಸರ್ ಕೇಳ್ತಾರೆ ಈಗ ಏನ್ ನೋಡಿದೆ ಅಂತ. ಆಗ ಹುಡುಗ ಹೇಳ್ತಾನೆ ‘ಸರ್ ನಾನು ಗ್ಲಾಸ್ ಮೇಲೆ ಮಾತ್ರ ಫೋಕಸ್ ಮಾಡಿದ್ದೆ. ಗ್ಲಾಸ್ನಲ್ಲಿರೋ ನೀರು ಚೆಲ್ಲಬಾರದು ಅಂತ ಆಕಡೆ ಈಕಡೆ ನೋಡಿಲ್ಲ ಅಂತ’ ಹೇಳ್ತಾನೆ.

ಸರ್ ಹೇಳ್ತಾರೆ ‘ನೋಡು ನೀನು ಮೊದಲು ಎಲ್ಲರು ಏನ್ ಹೇಳ್ತಾರೆ ಅಂತ ನೋಡುತ್ತಾ ಹೋದೆ, ಗ್ಲಾಸ್ ನಲ್ಲಿರೋ ನೀರು ಚೆಲ್ಲುತ್ತ ಹೋಯಿತು. ಇನ್ನೊಂದು ಸಲ ಹೋದಾಗ ಗ್ಲಾಸ್ ಮೇಲೆ ಮಾತ್ರ ಫೋಕಸ್ ಮಾಡಿದ್ದೆ ಯಾರು ಏನು ಹೇಳಿದರು ಅಂತ ನಿನಗೆ ಗೊತ್ತಾಗಲೇ ಇಲ್ಲ. ಮತ್ತೆ ನೀರು ಕೂಡ ಚೆಲ್ಲಲಿಲ್ಲ ಅಲ್ವ.

ಈ ಕಥೆಯಿಂದ ನಮಗೆ ಗೊತ್ತಾಗೋದು ಏನು ಅಂದ್ರೆ ನಾವು ಮಾಡೋ ಕೆಲಸ ಹೇಗಿದ್ರು ಕೂಡ ಜನ ಆಡ್ಕೋತಾರೆ ಆದ್ರೆ ಅದಕೆಲ್ಲ ಕಿವಿಕೊಡದೆ ನಮ್ಮ ಕೆಲಸ ಮಾತ್ರ ಮಾಡಿದ್ರೆ ನಮಗೆ ಯಶಸ್ಸು ಸಿಗುತ್ತೆ.

error: Content is protected !!