Thursday, December 4, 2025

Snacks Series 7 | ಬಿಸಿಬಿಸಿ ಬನ್ ಟಿಕ್ಕಿ ತಿನ್ನೋದು ಯಾರಿಗೆ ಇಷ್ಟ ಇಲ್ಲ ಹೇಳಿ?

ತಂಪು ವಾತಾವರಣ ಮನೆಯೊಳಗೆ ಬಿಸಿ ಬಿಸಿ ತಿಂಡಿ… ಸಂಜೆಯ ಟೀ ಜೊತೆಗೆ ಒಂದಿಷ್ಟು ಕ್ರಿಸ್ಪಿ ತಿಂಡಿ ಇದ್ದರೆ ಆ ಕ್ಷಣವೇ ವಿಶೇಷವಾಗುತ್ತದೆ. ಅಂಥ ಸಮಯಕ್ಕೆ ಸೂಪರ್ ಆಯ್ಕೆ ಎಂದರೆ ಬನ್ ಟಿಕ್ಕಿ. ಹುರಿದ ಆಲೂಗಡ್ಡೆ ಟಿಕ್ಕಿಯನ್ನ ಮೃದುವಾದ ಬನ್ ಮಧ್ಯೆ ಇಟ್ಟು ಸಾಸ್, ಚಟ್ನಿ ಸೇರಿಸಿ ತಯಾರಿಸುವ ಈ ಸ್ಟ್ರೀಟ್ ಫುಡ್ ಎಲ್ಲರಿಗೂ ಇಷ್ಟವಾಗುವ ಖಾದ್ಯ.

ಬೇಕಾಗುವ ಸಾಮಗ್ರಿಗಳು

ಬೇಯಿಸಿದ ಆಲೂಗಡ್ಡೆ – 3
ಈರುಳ್ಳಿ – 1
ಹಸಿಮೆಣಸು – 1
ಅಕ್ಕಿಹಿಟ್ಟು/ಮೈದಾ – 2 ಚಮಚ
ಅರಿಶಿನ – ½ ಚಮಚ
ಗರಂ ಮಸಾಲ – ½ ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ಕೊತ್ತಂಬರಿ ಸೊಪ್ಪು – ಸ್ವಲ್ಪ
ಎಣ್ಣೆ – ಹುರಿಯಲು
ಬನ್ – 4
ಟೊಮ್ಯಾಟೊ ಸಾಸ್, ಹಸಿರು ಚಟ್ನಿ, ಬೆಣ್ಣೆ – ಅಗತ್ಯಕ್ಕೆ

ತಯಾರಿಸುವ ವಿಧಾನ

ಮೊದಲು ಬೇಯಿಸಿದ ಆಲೂಗಡ್ಡೆಯನ್ನು ಚೆನ್ನಾಗಿ ಮ್ಯಶ್ ಮಾಡಿ. ಅದಕ್ಕೆ ಈರುಳ್ಳಿ, ಹಸಿಮೆಣಸು, ಅರಿಶಿನ, ಗರಂ ಮಸಾಲ, ಉಪ್ಪು, ಕೊತ್ತಂಬರಿ ಸೊಪ್ಪು ಮತ್ತು ಅಕ್ಕಿಹಿಟ್ಟು ಸೇರಿಸಿ ಚೆನ್ನಾಗಿ ಕಲಿಸಿ. ಇದರಿಂದ ಸಣ್ಣ ಟಿಕ್ಕಿ ಆಕಾರದ ಉಂಡೆಗಳನ್ನ ಮಾಡಿ ಬಿಸಿ ಎಣ್ಣೆಯಲ್ಲಿ ಚಿನ್ನದ ಬಣ್ಣ ಬರುವವರೆಗೂ ಹುರಿದುಕೊಳ್ಳಿ.

ಬನ್‌ಗಳನ್ನು ಮಧ್ಯದಲ್ಲಿ ಕತ್ತರಿಸಿ, ಸ್ವಲ್ಪ ಬೆಣ್ಣೆ ಹಚ್ಚಿ ತವಾ ಮೇಲೆ ಬಿಸಿ ಮಾಡಿ. ಈಗ ಬನ್‌ನೊಳಗೆ ಹಸಿರು ಚಟ್ನಿ, ಟೊಮ್ಯಾಟೊ ಸಾಸ್ ಹಚ್ಚಿ, ಮೇಲೆ ಒಂದು ಟಿಕ್ಕಿ ಇಟ್ಟು, ಮತ್ತೆ ಬನ್ ಮುಚ್ಚಿ. ಸ್ವಲ್ಪ ಸಾಸ್ ಮೇಲಿಂದ ಹಾಕಿದರೆ ರುಚಿ ಇನ್ನಷ್ಟು ಹೆಚ್ಚುತ್ತದೆ.

error: Content is protected !!