ಹೊಸದಿಗಂತ ಡಿಜಿಟಲ್ ಡೆಸ್ಕ್:
ಬದುಕಿನಲ್ಲಿ ಹೇಳದೇ ಬರುವ ಸಣ್ಣ ಪುಟ್ಟ ಖುಷಿಗಳು ಯಾವಾಗಲೂ ಸ್ಪೆಷಲ್. ಇದೇ ರೀತಿ ಸುಂದರ ವಿಡಿಯೋವೊಂದು ವೈರಲ್ ಆಗಿದ್ದು, ಹುಡುಗರ ಆಲೋಚನೆಗೆ ಜನ ಸೈ ಎಂದಿದ್ದಾರೆ.
ಹುಡುಗರ ಗುಂಪೊಂದು ಹೊಸ ವರ್ಷ ಆಚರಿಸೋಕೆ ಕೇಕ್ ತರಿಸಿದ್ದು, ಕೇಕ್ ಡೆಲಿವರಿ ಕೊಟ್ಟ ಝೊಮ್ಯಾಟೊ ಡೆಲಿವರಿ ಬಾಯ್ ಕೈಯಲ್ಲಿ ಕೇಕ್ ಕಟ್ ಮಾಡಿಸಿದ್ದಾರೆ. ಕೇಕ್ ಕಟ್ ಮಾಡುವ ವೇಳೆ ಅವರ ಮುಖದಲ್ಲಿ ಕಂಡ ಸಂತೋಷಕ್ಕೆ ಬೆಲೆ ಕಟ್ಟೋದು ಅಸಾಧ್ಯ.
ಕಿಶನ್ ಶ್ರೀವತ್ಸ ಟ್ವಿಟರ್‌ನಲ್ಲಿ ಈ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಹೊಸ ವರ್ಷಕ್ಕೆ ಇನ್ನೇನು ಒಂದು ಗಂಟೆ ಇದು ಎನ್ನುವಾಗ ಕೇಕ್ ಆರ್ಡರ್ ಮಾಡಿದ್ವಿ, ಆ ರಶ್‌ನಲ್ಲಿ ಒಂದು ಗಂಟೆಗೆ ಕೇಕ್ ಬರೋದು ಕಷ್ಟ ಎನಿಸಿತ್ತು. ಆದರೆ ಹೇಗೋ ಸರಿಯಾಗಿ 12 ಗಂಟೆಗೆ ಡೆಲಿವರಿ ಬಾಯ್ ಬಂದರು. ನಾವು ಅಲ್ಲಿಯೇ ಕೇಕ್ ತೆಗೆದೆವು. ಅವರ ಕೈಯಲ್ಲೇ ಕೇಕ್ ಕಟ್ ಮಾಡಿಸಿದೆವು. ಅನಿರೀಕ್ಷಿತ ಖುಷಿ, ಅನಿರೀಕ್ಷಿತ ಜನ ಎಂದು ಕಿಶನ್ ಬರೆದಿದ್ದಾರೆ.
@zomato @zomatocare @ZomatoProHelp
We ordered food at last minute around 11:00 PM something in zomato and it reached around exact 12:00 AM so we celebrated new year with the zomato delivery partner.
Unexpected happiness from Unexpected people #zomato #HappyNewYear #deliveryguy pic.twitter.com/J1Hv9JwCUy— Kishan Srivatsa (@SrivatsaKishan) December 31, 2022
ಹೀಗೆ ಆಗಾಗ ಯಾವುದಾದರೂ ರೂಪದಲ್ಲಿ ಖುಷಿ ಹಂಚಿ ನೋಡಿ, ಅವರ ಖುಷಿ ನಿಮ್ಮ ಮುಖದಲ್ಲಿಯೂ ನಗು ತರಿಸುತ್ತದೆ.