ಹೊಸದಿಗಂತ ಡಿಜಿಟಲ್ ಡೆಸ್ಕ್:
ರಸ್ತೆಯಲ್ಲಿ ನಿಲ್ಲಿಸಿದ್ದ ಬೈಕ್ವೊಂದನ್ನು ಒಂಟಿ ಸಲಗ ಎತ್ತೆಸೆದಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವಿಡಿಯೋವನ್ನು ಬೆಂಗಳೂರಿನ ಸಂಚಾರ ಡಿಸಿಪಿ ಪೂರ್ವ ವಿಭಾಗದ ಕಲಾ ಕೃಷ್ಣಸ್ವಾಮಿ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ‘ಮುಖ್ಯ ರಸ್ತೆಯಲ್ಲಿ ವಾಹನಗಳನ್ನು ನಿಲ್ಲಿಸಬೇಡಿ’ ಎಂದು ಶೀರ್ಷಿಕೆ ನೀಡಿದ್ದಾರೆ.
ಈ ಘಟನೆಯ ವೀಡಿಯೋವನ್ನು ಪೊಲೀಸರು ಬಳಸಿಕೊಂಡು ಜನರಿಗೆ ಮಾಹಿತಿ ನೀಡುತ್ತಿರುವುದು ಒಳ್ಳೆಯದು ಎಂದು. ಮತ್ತೊಬ್ಬ ನೆಟಿಜನ್ ಆನೆಗೆ ಪೊಲೀಸ್ ಕೆಲಸ ಕೊಡಿ. ಆನೆ ಟ್ರಾಫಿಕ್ ನಿಯಮಗಳನ್ನು ಜಾರಿಗೊಳಿಸುತ್ತಿದೆ. ಈ ಆನೆ ಸಿವಿಲ್ ಡ್ರೆಸ್ ನಲ್ಲಿದ್ದ ಟ್ರಾಫಿಕ್ ಪೊಲೀಸ್ ಎಂದು ಮತ್ತೊಬ್ಬ ನೆಟಿಜನ್ ಕಾಮೆಂಟ್ ಮಾಡಿದ್ದಾರೆ.
" Don't park on main road " pic.twitter.com/Z8OYGBZmDR
— Kala Krishnaswamy, IPS DCP Traffic East (@DCPTrEastBCP) January 3, 2023