ಸಾಮಾನ್ಯವಾಗಿ ಚಳಿಗಾಲದ ತಂಪಾದ ವಾತಾವರಣದಲ್ಲಿ, ಒಂದು ಕಪ್ ಬಿಸಿ ಕಾಫಿ ಅಥವಾ ಟೀ ಆ ಅನುಭವವನ್ನು ವರ್ಣಿಸಲು ಸಾಧ್ಯವಿಲ್ಲ. ಚಳಿ ನಿವಾರಣೆಗೆ ಮತ್ತು ಸೋಮಾರಿತನವನ್ನು ಓಡಿಸಲು ಹೆಚ್ಚಿನವರು ಈ ಬಿಸಿ ಪಾನೀಯಗಳನ್ನು ಅತಿಯಾಗಿ ಸೇವಿಸುತ್ತಾರೆ. ಆದರೆ, ನಿಮ್ಮ ಈ ಪ್ರೀತಿಯ ಅಭ್ಯಾಸವೇ ನಿಮ್ಮ ಆರೋಗ್ಯಕ್ಕೆ ಸಮಸ್ಯೆ ತರಬಹುದು ಎಂದು ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ. ಈ ಋತುವಿನಲ್ಲಿ ನಿಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸುವುದು ಅತ್ಯಂತ ಮುಖ್ಯ.
ಹಾಗಾದರೆ, ಚಳಿಗಾಲದಲ್ಲಿ ಹೆಚ್ಚು ಕಾಫಿ ಮತ್ತು ಚಹಾ ಕುಡಿಯುವುದು ಏಕೆ ಒಳ್ಳೆಯದಲ್ಲ? ಇದರಿಂದ ಉಂಟಾಗುವ ಸಮಸ್ಯೆಗಳೇನು?
ಮೂಳೆ ಮತ್ತು ಕೀಲು ನೋವಿನ ಅಪಾಯ: ನಿಮ್ಮ ದಿನವನ್ನು ಒಂದು ಕಪ್ ಕಾಫಿ ಅಥವಾ ಚಹಾದೊಂದಿಗೆ ಪ್ರಾರಂಭಿಸುವುದು ಸಾಮಾನ್ಯವಾದರೂ, ದಿನವಿಡೀ ಇದನ್ನು ಅತಿಯಾಗಿ ಸೇವಿಸುವುದರಿಂದ ಮೂಳೆ ಸಮಸ್ಯೆಗಳು ಉಂಟಾಗಬಹುದು. ನಿರ್ದಿಷ್ಟವಾಗಿ ಹೇಳುವುದಾದರೆ, ಅತಿಯಾದ ಸೇವನೆಯು ಮೊಣಕಾಲು ನೋವು ಬರುವ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.
ಹಸಿವಿನ ಕೊರತೆ: ನೀವು ಇಷ್ಟ ಪಡುವ ಈ ಅಭ್ಯಾಸವು ನಿಮ್ಮ ಹಸಿವನ್ನು ಕಡಿಮೆ ಮಾಡುತ್ತದೆ. ಇದರಿಂದ ಪೌಷ್ಟಿಕಾಂಶಯುಕ್ತ ಆಹಾರ ಸೇವನೆ ಕಡಿಮೆಯಾಗಿ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳು ಸಿಗುವುದಿಲ್ಲ.
ತೂಕ ಇಳಿಕೆಗೆ ಹಿನ್ನಡೆ: ತೂಕ ಕಡಿಮೆ ಮಾಡಿಕೊಳ್ಳಲು ಪ್ರಯತ್ನಿಸುತ್ತಿರುವವರು ಚಹಾ ಮತ್ತು ಕಾಫಿ ಕುಡಿಯುವುದನ್ನು ಸಂಪೂರ್ಣವಾಗಿ ನಿಲ್ಲಿಸುವುದು ಅಥವಾ ತೀವ್ರವಾಗಿ ಕಡಿಮೆ ಮಾಡುವುದು ಉತ್ತಮ ಎಂದು ತಜ್ಞರು ಸಲಹೆ ನೀಡುತ್ತಾರೆ.
ಇತರ ಆರೋಗ್ಯ ಸಮಸ್ಯೆಗಳು: ದಿನಕ್ಕೆ ಕನಿಷ್ಠ ಎರಡು ಬಾರಿ ಚಹಾ ಅಥವಾ ಕಾಫಿ ಕುಡಿಯುವುದು ಸಾಮಾನ್ಯವಾಗಿ ಒಳ್ಳೆಯದು. ಆದರೆ ಅದಕ್ಕಿಂತ ಹೆಚ್ಚಾದರೆ ಅನೇಕ ರೀತಿಯ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ.
ಚಳಿಗಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು, ಬಿಸಿ ಪಾನೀಯಗಳ ಅತಿಯಾದ ಸೇವನೆಯನ್ನು ಕಡಿಮೆ ಮಾಡಿ. ಬದಲಿಗೆ, ಸಾಧ್ಯವಾದಷ್ಟು ಹೆಚ್ಚು ಹಣ್ಣು ಮತ್ತು ಆರೋಗ್ಯಕರ ಆಹಾರವನ್ನು ಸೇವಿಸಿ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ, ಚಳಿಗಾಲದ ರೋಗಗಳಿಂದ ನಿಮ್ಮನ್ನು ಕಾಪಾಡುತ್ತದೆ.

