1ಮಿಲಿಯನ್ ಭಾರತೀಯ ಮಹಿಳಾ ಉದ್ಯಮಿಗಳಿಗೆ ಮಾರ್ಗದರ್ಶನ ನೀಡಲಿದೆ ಗೂಗಲ್‌ ಇಂಡಿಯಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಭಾರತದಲ್ಲಿ ಮಹಿಳಾ ಉದ್ದಿಮೆದಾರರನ್ನು ಉತ್ತೇಜಿಸುವ ದೃಷ್ಟಿಯಿಂದ ಗೂಗಲ್‌ ನಂತ ಟೆಕ್‌ ದೈತ್ಯರ ಮೂಲಕ ಮಾರ್ಗದರ್ಶನ ನೀಡಲು ಭಾರತ ಸರ್ಕಾರ ಹಾಗು ಅಮೆರಿಕ ಜಂಟಿ ಪ್ರಯತ್ನಗಳನ್ನು ನಡೆಸುತ್ತಿದ್ದು ಇದರ ಭಾಗವಾಗಿ ಭಾರತದ 1 ಮಿಲಿಯನ್‌ ಮಹಿಳಾ ಉದ್ಯಮಿಗಳಿಗೆ ಗೂಗಲ್‌ ಇಂಡಿಯಾ ಮಾರ್ಗದರ್ಶನ ಮಾಡಲಿದೆ. ಈ ಕುರಿತು ಅಮೆರಿಕದ ಆಂಟೋನಿ ಬ್ಲಿಂಕನ್‌ ಘೋಷಣೆ ಮಾಡಿದ್ದು ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ US-ಭಾರತ ಒಕ್ಕೂಟದ ಕೆಲಸವನ್ನು ಶ್ಲಾಘಿಸಿದ್ದಾರೆ.

ಬಿಡೆನ್‌ ಆಡಳಿತವು ಮಹಿಳಾ ಉದ್ಯಮಿಗಳಿಗೆ ಬಲತುಂಬುವಲ್ಲಿ ಶ್ರಮಿಸುತ್ತಿದ್ದು ಮಾರ್ಗದರ್ಶನ ಮತ್ತು ತರಬೇತಿ ಅವಕಾಶಗಳ ಕೊರತೆಯಂತಹ ಸಮಸ್ಯೆಗಳು ಮತ್ತು ಮಹಿಳೆಯರು ತಮ್ಮ ಸ್ವಂತ ವ್ಯವಹಾರಗಳನ್ನು ಪ್ರಾರಂಭಿಸುವುದನ್ನು ಆಗಾಗ್ಗೆ ತಡೆಯುವ ಕೆಲವು ಸಮಸ್ಯೆಗಳನ್ನು ಪರಿಹರಿಸಲು ಅವರಿಗೆ ಮಾರ್ಗದರ್ಶನ ನೀಡಲು ಬದ್ಧವಿರುವುದಾಗಿ ಹೇಳಿದ್ದಾರೆ.

“ಭಾರತೀಯ ಮಹಿಳೆಯರಿಗೆ ತಾಂತ್ರಿಕ ಕೌಶಲ್ಯ ಮತ್ತು ನೆಟ್‌ವರ್ಕಿಂಗ್ ಅವಕಾಶಗಳನ್ನು ಒದಗಿಸುವ ಸಲುವಾಗಿ ಖಾಸಗಿ ವಲಯ ಮತ್ತು ನಾಗರಿಕ ಸಮಾಜವನ್ನು ಸಂಪರ್ಕಿಸುವ ಮಹಿಳಾ ಆರ್ಥಿಕ ಸಬಲೀಕರಣಕ್ಕಾಗಿ US-ಭಾರತ ಒಕ್ಕೂಟದಂತಹ ಪ್ರಯತ್ನಗಳನ್ನು ನಾವು ಮಾಡುತ್ತಿದ್ದೇವೆ. ಗೂಗಲ್‌ ಇಂಡಿಯಾದ ಮೂಲಕ ಮುಂದಿನ ದಿನಗಳಲ್ಲಿ 1 ಮಿಲಿಯನ್‌ ಮಹಿಳಾ ಉದ್ದಿಮೆದಾರರಿಗೆ ಮಾರ್ಗದರ್ಶನ ಮಾಡುವ ಗುರಿ ಹೊಂದಲಾಗಿದೆ” ಎಂದು ಬ್ಲಿಂಕೆನ್‌ ಹೇಳಿರುವುದಾಗಿ ಪಿಟಿಐ ವರದಿಹೇಳಿದೆ.

ಕೋವಿಡ್‌ ನಂತರದ ಕಾಲಘಟ್ಟದ ಆರ್ಥಿಕ ಸಂಘರ್ಷವನ್ನು ಎದುರಿಸಲು, ಹವಾಮಾನ ಬದಲಾವಣೆಯಂತಹ ಬಿಕ್ಕಟ್ಟು ನಿವಾರಣೆಗೆ ಮಹಿಳೆಯರ ಪಾಲುದಾರಿಕೆ ಅತ್ಯಂತ ಮಹತ್ವದ್ದು ಎಂದಿರುವ ಅವರು ಮಹಿಳೆಯ ಆರ್ಥಿಕ ಭಾಗವಹಿಸುವಿಕೆಗೆ ಉತ್ತೇಜನ ನೀಡುವುದಾಗಿ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!