ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರವಾದ ಸರಕುಗಳನ್ನು ಸಾಗಿಸಲು ನಾವು ಆಟೋಗಳು, ರಿಕ್ಷಾ ಮತ್ತು ಟ್ರಕ್ಗಳನ್ನು ಬಳಸುತ್ತೇವೆ. ಚಿಕ್ಕ ಚಿಕ್ಕ ವಸ್ತುಗಳನ್ನು ಮಾತ್ರ ಸೈಕಲ್ನಲ್ಲಿ ಒಯ್ಯುತ್ತೇವೆ. ದೊಡ್ಡ ವಸ್ತುಗಳನ್ನು ಸೈಕಲ್ನಲ್ಲಿ ಸಾಗಿಸುವಂತಿಲ್ಲ. ಅಲ್ಲದೆ, ರಸ್ತೆಯಲ್ಲಿ ಸೈಕ್ಲಿಂಗ್ ಮಾಡುವಾಗ ತುಂಬಾ ಜಾಗರೂಕರಾಗಿರದಿದ್ದರೆ ಜೀವಕ್ಕೇ ಅಪಾಯ. ಆದರೆ, ವ್ಯಕ್ತಿಯೊಬ್ಬ ಸೈಕಲ್ ತುಳಿಯುತ್ತಾ ತಲೆ ಮೇಲೆ ಬಾಗಿಲು ಮತ್ತು ಇತರೆ ಸಾಮಾನುಗಳನ್ನು ಹೊತ್ತು ಸಾಗಿದ್ದಾನೆ.
ಎರಡೂ ಕೈಗಳನ್ನು ತಲೆ ಮೇಲೆ ಹೊತ್ತಿರುವ ಸಾಮಾನುಗಳನ್ನಡಿದು ಸೈಕಲ್ ತುಳಿದಿರುವ ವಿಡಿಯೋ ಇದೀಗ ಸಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸೈಕಲ್ ಹಿಡಿಯದೆ ಹೋಗುತ್ತಿರುವುದನ್ನು ಕಂಡು ಸ್ಥಳೀಯರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋವನ್ನು ಐಪಿಎಸ್ ಅಧಿಕಾರಿ ಆರಿಫ್ ಶೇಖ್ ಈ ವಿಡಿಯೋವನ್ನು ಟ್ವಿಟರ್ನಲ್ಲಿ ಪೋಸ್ಟ್ ಮಾಡಿ ‘ಇದು ಭಾರತ’ ಎಂದು ಹೇಳಿದ್ದಾರೆ.
ಜೀವನದಲ್ಲಿ ಏನೂ ಇಲ್ಲದಿದ್ದರೂ ಆತ್ಮಸ್ಥೈರ್ಯ ಇದ್ದರೆ ಸಾಕು ಎನ್ನುವ ಮಾತಿದೆ. ಜನನಿಬಿಡ ರಸ್ತೆಯಲ್ಲಿ ಸೈಕಲ್ ತುಳಿದ ವ್ಯಕ್ತಿಯನ್ನು ಕೆಲವರಿಂದ ಮೆಚ್ಚುಗೆ/ಟೀಕೆ ಎರಡೂ ವ್ಯಕ್ತವಾಗುತ್ತಿದೆ.
और कुछ मिले ना मिले…life में बस इतना confidence मिल जाए… pic.twitter.com/bI6HcnuB1z
— Arif Shaikh IPS (@arifhs1) January 7, 2023