ಸಾಕಷ್ಟು ಸಮಯದಿಂದ ಡೇಟಿಂಗ್‌ನಲ್ಲಿ ಇರುವವರು, ಪ್ರೀತಿಯಲ್ಲಿ ಇದ್ದವರು, ಸದ್ದಿಲ್ಲದೇ ಎಂಗೇಜ್‌ಮೆಂಟ್ ಮಾಡಿಕೊಂಡವರು, ಪ್ರೀತಿ-ಪ್ರೇಮದ ವಿಷಯ ಮುಚ್ಚಿಡದವರು ಹೀಗೆ ಈ ವರ್ಷ ಸಾಕಷ್ಟು ಮಂದಿ ಹಸೆಮಣೆ ಏರುತ್ತಿದ್ದಾರೆ. ಯಾವ ಸೆಲೆಬ್ರಿಟಿಸ್ ಈ ವರ್ಷ ಮದುವೆ ಆಗುತ್ತಿದ್ದಾರೆ? ಇಲ್ಲಿದೆ ಮಾಹಿತಿ..
ವಸಿಷ್ಠ ಸಿಂಹ- ಹರಿಪ್ರಿಯ
ಸದ್ದೇ ಇಲ್ಲದೆ ಡೇಟಿಂಗ್ ಮಾಡುತ್ತಿದ್ದ ಸಿಂಹಪ್ರಿಯ ಜೋಡಿ, ಇತ್ತೀಚೆಗಷ್ಟೇ ಏರ್‌ಪೋರ್ಟ್‌ನಲ್ಲಿ ಒಟ್ಟಿಗೇ ಕಾಣಿಸಿದ್ದರು. ಕೈ ಕೈ ಹಿಡಿದು ಬಂದ ವಿಡಿಯೋ ಎಲ್ಲೆಡೆ ವೈರಲ್ ಆಗಿತ್ತು. ಅದಾದ ನಂತರ ಅವರೇ ತಮ್ಮ ಪ್ರೀತಿ ಬಗ್ಗೆ ಹೇಳಿಕೊಂಡರು. ನಿಶ್ಚಿತಾರ್ಥ ಕೂಡ ಮಾಡಿಕೊಂಡಿದ್ದಾರೆ.
ಕೆ.ಎಲ್ ರಾಹುಲ್- ಆಥೀಯಾ ಶೆಟ್ಟಿ
ಬಹುಕಾಲದ ಸ್ನೇಹ ಪ್ರೀತಿಗೆ ತಿರುಗಿದ್ದು, ಕನ್ನಡಿಗ ಕೆ.ಎಲ್. ರಾಹುಲ್ ಸುನೀಲ್ ಶೆಟ್ಟಿ ಮಗಳು, ನಟಿ ಆಥಿಯಾ ಶೆಟ್ಟಿ ಅವರನ್ನು ವರಿಸಲಿದ್ದಾರೆ. ಜನವರಿಯಲ್ಲಿಯೇ ಇವರ ಮದುವೆ ಅನ್ನೋ ಸುದ್ದಿ ಹರಿದಾಡ್ತಿದೆ.
ಕಿಯಾರಾ ಅಡ್ವಾನಿ-ಸಿದ್ಧಾರ್ಥ್ ಮಲ್ಹೋತ್ರ
ಬಾಲಿವುಡ್‌ನ ಶೇರ್ ಶಾ ಜೋಡಿ ಸಿದ್ಧಾರ್ಥ್ ಹಾಗೂ ಕಿಯಾರಾ ಕದ್ದುಮುಚ್ಚಿ ಡೇಟಿಂಗ್ ಮಾಡುತ್ತಿದ್ದಾರೆ. ಎಲ್ಲಾ ಕಾರ್ಯಕ್ರಮಗಳಲ್ಲಿಯೂ ಇವರಿಬ್ಬರಿಗೆ ರೇಗಿಸಲಾಗುತ್ತದೆ. ಆದರೂ ಈ ಜೋಡಿ ವಿಷಯ ಹೊರಗೆ ಹೇಳಿಕೊಂಡಿಲ್ಲ. ಈ ವರ್ಷದ ಅದ್ಧೂರಿ ಮದುವೆ ಇವರದ್ದಾಗಲಿದೆ ಎನ್ನಲಾಗಿದೆ.
ಇರಾ ಖಾನ್- ನೂಪುರ್ ಶಿಖರೆ
ಬಹುಕಾಲದ ಗೆಳೆಯನ ಜೊತೆ ಅಮಿರ್ ಖಾನ್ ಪುತ್ರಿ ಇರಾ ಇತ್ತೀಚೆಗಷ್ಟೇ ಭರ್ಜರಿ ಎಂಗೇಜ್‌ಮೆಂಟ್ ಪಾರ್ಟಿ ನೀಡಿದ್ದರು, ಇದೇ ವರ್ಷದಲ್ಲಿ ಜೋಡಿ ಹಸೆಮಣೆ ಏರಲಿದ್ದಾರೆ.
ಅನಂತ್ ಅಂಬಾನಿ- ರಾಧಿಕಾ ಮರ್ಚೆಂಟ್
ಮುಖೇಶ್ ಅಂಬಾನಿ ನೀತಾ ಅಂಬಾನಿ ಕಿರಿಯ ಪುತ್ರ ಅನಂತ್ ಅಂಬಾನಿ ರಾಧಿಕಾ ಮರ್ಚೆಂಟ್ ಜತೆ ವಿವಾಹಕ್ಕೆ ಸಿದ್ಧವಾಗಿದ್ದಾರೆ. ಕಳೆದ ವಾರಷ್ಟೇ ರೋಕಾ ಕಾರ್ಯಕ್ರಮ ಮಾಡಿದ್ದರು.