‘ತುನಿಶಾ ಶರ್ಮಾ- ಶ್ರೀಜಾನ್ ಬ್ರೇಕಪ್ ಆಗಿತ್ತು’ ಹೊಸ ಸುದ್ದಿ ಹೇಳ್ತಿದ್ದಾರೆ ವಕೀಲರು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಟಿ ತುನಿಶಾ ಶರ್ಮಾ ಆತ್ಮಹತ್ಯೆಗೆ ಸಂಬಂಧಿಸಿದಂತೆ ಹೊಸ ತಿರುವುಗಳು ಹುಟ್ಟಿಕೊಳ್ಳುತ್ತಿದ್ದು, ಇದೀಗ ಶ್ರೀಜಾನ್ ತುನಿಷಾ ಬಾಯ್‌ಫ್ರೆಂಡ್ ಅಲ್ಲ ಎಂದು ಶ್ರೀಜಾನ್ ಪರ ವಕೀಲರು ಹೇಳಿದ್ದಾರೆ.

ಆತ್ಮಹತ್ಯೆಗೂ 15 ದಿನ ಮುನ್ನವೇ ತುನಿಶಾ ಶ್ರೀಜಾನ್ ಜತೆ ಬ್ರೇಕಪ್ ಮಾಡಿಕೊಂಡಿದ್ದರು. ಅಲಿ ಎನ್ನುವ ವ್ಯಕ್ತಿ ಜತೆ ಡೇಟಿಂಗ್ ಆರಂಭಿಸಿದ್ದರು ಎಂದು ಹೇಳಿದ್ದಾರೆ.

ಶ್ರೀಜಾನ್ ಜತೆ ಬ್ರೇಕಪ್ ಆದ ನಂತರ ತುನಿಶಾ ಡೇಟಿಂಗ್ ಆಪ್ ಬಳಸಿದ್ದರು. ಇದರಿಂದ ಅಲಿ ಎನ್ನುವವರ ಜತೆ ಡೇಟಿಂಗ್ ಮಾಡುತ್ತಿದ್ದರು. ತುನಿಶಾ ಆತ್ಮಹತ್ಯೆ ನಿರ್ಧಾರಕ್ಕೆ ಬರುವ ಮುನ್ನ 15 ನಿಮಿಷ ಅಲಿ ಜತೆ ವಿಡಿಯೋ ಕಾಲ್‌ನಲ್ಲಿ ಮಾತನಾಡಿದ್ದಾರೆ. ತುನಿಶಾ ಬಾಯ್‌ಫ್ರೆಂಡ್ ಅಲಿ, ಶ್ರೀಜಾನ್ ಅಲ್ಲ, ಶ್ರೀಜಾನ್ ಜತೆ ತುನಿಶಾ ಸಂಪರ್ಕದಲ್ಲಿಯೂ ಇರಲಿಲ್ಲ ಎಂದು ಶ್ರೀಜಾನ್ ಪರ ವಕೀಲರು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!