ಒಂದು ದಿನ ಸಿಂಹಕ್ಕೆ ಏನೋ ವಾಸನೆ ಬಾರೋ ಹಾಗೆ ಅನಿಸುತ್ತೆ. ಏನು ಅಂತ ಎಲ್ಲ ಕಡೆ ಮೂಸಿ ಮೂಸಿ ನೋಡುತ್ತೆ. ಕಡೆಗೆ ಗೊತ್ತಾಗುತ್ತೆ ಅದರ ದೇಹದಿಂದಾನೆ ಬರ್ತಿರೋದು ಅಂತ. ಅದಿಕ್ಕೆ ಸಿಂಹ ದಾರೀಲಿ ಹೋಗ್ತಿರೋ ಜಿಂಕೆನಾ ಕೇಳುತ್ತೆ ‘ನನ್ನ ದೇಹದಿಂದ ವಾಸನೆ ಬರ್ತಿದ್ಯಾ?’ ಅಂತ ಆಗ ಜಿಂಕೆ ನಿಜಾನೆ ಹೇಳುತ್ತೆ. ‘ಹೌದು ಬರ್ತಿದೆ’ ಅಂತ.
ಸಿಂಹಕ್ಕೆ ಕೋಪ ಬಂದು ಜಿಂಕೆನಾ ಕೊಂದೇ ಬಿಡುತ್ತೆ. ಮತ್ತೆ ಸ್ವಲ್ಪ ಮುಂದೆ ಹೋಗೋವಾಗ ಮಂಗ ಸಿಗುತ್ತೆ ಅದ್ರಲ್ಲೂ ಇದೆ ಪ್ರಶ್ನೆ ಕೇಳುತ್ತೆ ‘ನಾನು ವಾಸನೆ ಬರ್ತಿದ್ದೀನಾ’ ಅಂತ ಅಗ್ಗ ಮಂಗ ಕೂಡ ಭಯದಿಂದ ಹೇಳುತ್ತೆ ರಾಜ ‘ಇಲ್ಲ ರಾಜ ನೀನು ಕಾಡಿನ ರಾಜ ನೀನು ವಾಸನೆ ಬರೋಕೆ ಹೇಗೆ ಸಾಧ್ಯ’ ಅಂತ. ಶಿಮಕ್ಕೆ ಕೋಪ ಬರುತ್ತೆ ಮಂಗ ಗೊತ್ತಿದ್ರೂ ಸುಳ್ಳು ಹೇಳ್ತಿದೆ ಅಂತ ಮಂಗನನ್ನು ಕೊಂಡು ಬಿಡುತ್ತೆ.
ಮತ್ತೆ ಮುಂದೆ ಹೋಗೋವಾಗ ನರಿಯೊಂದು ಎದುರು ಸಿಗುತ್ತೆ ಮತ್ತೆ ಸಿಂಹ ಅದೇ ಪ್ರಶ್ನೆ ಕೇಳುತ್ತೆ ‘ನಾನು ವಾಸನೆ ಬರ್ತಿದ್ದೀನಾ’ ಅಂತ. ಆಗ ನರಿ ಸ್ವಲ್ಪ ಯೋಚನೆ ಮಾಡಿ ‘ ರಾಜ ನನ್ನನ್ನು ಕ್ಷಮಿಸು ನನ್ನ ಮೂಗು ಶೀತದಿಂದ ಕಟ್ಟಿದೆ ನಂಗೆ ಯಾವುದೇ ವಾಸನೆ, ಪರಿಮಳ ನೋಡೋಕೆ ಆಗ್ತಿಲ್ಲ, ಬೇರೆ ಯಾರನ್ನಾದರು ಕೇಳು’ ಅಂತ ಹೇಳುತ್ತೆ. ಸಿಂಹ ನರಿಗೆ ಏನು ಮಾಡದೇ ಅಲ್ಲಿಂದ ಹೊರತು ಹೋಗುತ್ತೆ.
ಜೀವನದಲ್ಲಿ ನಾವು ಕೂಡ ಈ ನರಿ ತರ ಇರಬೇಕು ಅಲ್ವಾ! ನಮಗೆ ಬೇಡದಿರೋ ವಿಷ್ಯ ಆಗಿರಲಿ, ಅಥವಾ ಬೇರೆಯವರ ವಿಷಯದಲ್ಲಿ ಮುಗುತೂರಿಸೋದು ತಪ್ಪು, ಯಾಕಂದ್ರೆ ಕೆಲವೊಮ್ಮೆ ಬೇರೆಯವರ ವಿಷಯದಲ್ಲಿ ನಾವೇ ಬಲಿಪಶುಗಳಾಗಬೇಕಾಗುತ್ತೆ.

