ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ಯಾರಿಸ್ ಗರೆ-ಡು-ನಾರ್ಡ್ ರೈಲು ನಿಲ್ದಾಣದಲ್ಲಿ ಬುಧವಾರ (ಸ್ಥಳೀಯ ಕಾಲಮಾನ) ಚಾಕು ದಾಳಿ ನಡೆದಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ಸಿಎನ್ಎನ್ ವರದಿ ಮಾಡಿದೆ. ಪ್ಯಾರಿಸ್ನ ಸೆಂಟ್ರಲ್ ರೈಲ್ವೇ ನಿಲ್ದಾಣವೊಂದರಲ್ಲಿ ಪ್ರಯಾಣಿಕರನ್ನು ಗಾಯಗೊಳಿಸಿದ ಅಪರಿಚಿತ ವ್ಯಕ್ತಿಯ ಮೇಲೆ ಪೊಲೀಸರು ಗುಂಡು ಹಾರಿಸಿದ್ದಾರೆ ಎಂದು ಫ್ರೆಂಚ್ ರೈಲ್ ಆಪರೇಟರ್ ಸೊಸೈಟೆ ನ್ಯಾಶನೇಲ್ ಡೆಸ್ ಚೆಮಿನ್ಸ್ ಡಿ ಫೆರ್ ಫ್ರಾನ್ಕೈಸ್ (ಎಸ್ಎನ್ಸಿಎಫ್) ಟ್ವೀಟ್ ಮಾಡಿದ್ದಾರೆ.
ದಾಳಿಯಲ್ಲಿ ಹಲವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ಖಚಿತಪಡಿಸಿದ್ದಾರೆ. ಆಂತರಿಕ ಸಚಿವ ಗೆರಾರ್ಡ್ ಡಾರ್ಮಾನಿನ್ ಅವರು ದಾಳಿಯನ್ನು ದೃಢಪಡಿಸಿದ್ದಾರೆ. ಶಂಕಿತನನ್ನು ಪೊಲೀಸರು ಹೊಡೆದುರುಳಿಸಿದ್ದಾರೆ ಎಂದು ಡಿಡಬ್ಲ್ಯೂ ನ್ಯೂಸ್ ವರದಿ ಮಾಡಿದೆ.
ಘಟನೆಯಿಂದ ಪ್ಯಾರಿಸ್ ನಾರ್ಡ್ನ ರಸ್ತೆ ಟ್ರಾಫಿಕ್ನಿಂದ ಕಂಗೆಟ್ಟಿದೆ. ಗಾಯಾಳುಗಳು ಅಗತ್ಯ ತುರ್ತು ಸೇವೆಗಳನ್ನು ನೀಡಲಾಗಿದೆ. ದಾಳಿಕೋರ ಸ್ಪಾಟ್ ಡೆಡ್ ಆಗಿದ್ದು, ಭದ್ರತಾ ಪರಿಧಿಯನ್ನು ಸ್ಥಾಪಿಸಲಾಗಿದೆ.
ಎಷ್ಟು ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಹೇಳಲಿಲ್ಲ, ಆದರೆ ಫ್ರೆಂಚ್ ಬ್ರಾಡ್ಕಾಸ್ಟರ್ ಬಿಎಫ್ಎಂ ಟಿವಿ 6ಮಂದಿ ಎಂದು ಉಲ್ಲೇಖಿಸಿದೆ. ಪ್ರಯಾಣಿಕರ ದಟ್ಟಣೆಯ ಕೇಂದ್ರವಾಗಿರುವ ಗರೆ ಡು ನಾರ್ಡ್ ನಿಲ್ದಾಣದಲ್ಲಿ ಈ ದಾಳಿ ನಡೆದಿದೆ.