ಹೊಸದಿಗಂತ ಡಿಜಿಟಲ್ ಡೆಸ್ಕ್:
ನೋಟಿಸ್ ಟು ಏರ್ ಮಿಷನ್ಸ್ (ಎನ್‌ಓಟಿಎಎಂ) ವ್ಯವಸ್ಥೆಯಲ್ಲಿ ದೋಷ ಕಾಣಿಸಿಕೊಂಡ ಹಿನ್ನಲೆಯಲ್ಲಿ ಅಮೆರಿಕದಲ್ಲಿ ಎಲ್ಲಾ ವಿಮಾನಗಳು ಸ್ಥಗಿತಗೊಂಡಿವೆ.
ಸ್ಥಳೀಯ ಮಾಧ್ಯಮಗಳ ವರದಿಯ ಪ್ರಕಾರ ಕನಿಷ್ಠ 760 ವಿಮಾನಗಳ ವಿಳಂಬವಾಗಿ ವಿಮಾನ ಸಂಚಾರ ಸ್ಥಗಿತಗೊಂಡಿದೆ.
ಅಮೆರಿಕದ ನಾಗರಿಕ ವಿಮಾನಯಾನ ಸಂಸ್ಥೆಯ ವೆಬ್‌ಸೈಟ್ ಕೂಡ ಇದನ್ನು ಖಚಿತಪಡಿಸಿದೆ. ಫೆಡರಲ್ ಏವಿಯೇಷನ್ ಏಜೆನ್ಸಿ ಈ ಕುರಿತಾಗಿ ಮುನ್ನೆಚ್ಚರಿಕೆ ನೋಟಿಸ್ ಅನ್ನು ನೀಡಿದೆ. ನೋಟಮ್ (ವಿಮಾನ ಕಾರ್ಯಾಚರಣೆಗಳಿಗೆ ಸೂಚನೆ) ವ್ಯವಸ್ಥೆಯು ವಿಫಲವಾಗಿದೆ.
ಅದು ಯಾವಾಗ ಸರಿಯಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಆದರೆ, ಶೀಘ್ರ ಸರಿಪಡಿಸುವ ಪ್ರಯತ್ನ ನಡೆಯುತ್ತಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಅಮೆರಿಕ ಕಾಲಮಾನದ ಪ್ರಕಾರ ಬೆಳಗ್ಗೆ 5.31ರ ಸುಮಾರಿಗೆ ಈ ತಾಂತ್ರಿಕ ದೋಷ ಬೆಳಕಿಗೆ ಬಂದಿದೆ. ಆದರೆ, ಇದಕ್ಕೆ ಕಾರಣ ಏನು ಎಂಬುದು ಇಲ್ಲಿಯವರೆಗೆ ಸ್ಪಷ್ಟವಾಗಿಲ್ಲ.
ಇದುವರೆಗೆ 760 ವಿಮಾನಗಳನ್ನು ರದ್ದುಗೊಳಿಸಲಾಗಿದೆ ಅಥವಾ ವಿಳಂಬಗೊಳಿಸಲಾಗಿದೆ. ಫ್ಲೈಟ್ ಟ್ರ್ಯಾಕರ್ FlightAware.com ಪ್ರಕಾರ, 91 ವಿಮಾನಗಳನ್ನು ರದ್ದುಗೊಳಿಸಲಾಗಿದೆ. ‘ಕಂಪ್ಯೂಟರ್ ಸಿಸ್ಟಮ್‌ನಲ್ಲಿನ ತಾಂತ್ರಿಕ ದೋಷದಿಂದಾಗಿ ಇದು ಸಂಭವಿಸಿದೆ. ಸಮಸ್ಯೆ ಏನು ಎನ್ನುವುದು ಹೊತ್ತಾಗಿದೆ. ಶೀಘ್ರದಲ್ಲೇ ವಿಮಾನ ಕಾರ್ಯಾಚರಣೆಯನ್ನು ಮರುಸ್ಥಾಪಿಸಲು ಪ್ರಯತ್ನಿಸಲಾಗುತ್ತಿದೆ’ಎಂದು ಎಫ್‌ಎಎ ಹೊಸ ಹೇಳಿಕೆಯಲ್ಲಿ ತಿಳಿಸಿದೆ.