ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಾಹೀರಾತು ಅಂದಾಗ ಅಲ್ಲಿ ಸೆಲೆಬ್ರೆಟಿಗಳ ಪಾತ್ರ ಅತೀ ಅಧಿಕವಾಗಿರುತ್ತದೆ. ಅದು ಸಣ್ಣ ಪೆನ್ ನಿಂದ ದೊಡ್ಡ ಕಾರು ತನಕ ವಾದರೂ ಸರಿ ಎಲ್ಲದರಲ್ಲಿ ಅವರ ಪಾತ್ರ ಅತೀ ಮುಖ್ಯವಾಗಿರುತ್ತದೆ.
ಅದೇ ರೀತಿ ಆಹಾರಕ್ಕೆ ಸಂಬಂಧಪಟ್ಟ ಜಾಹೀರಾತುಗಳು ಕೂಡ. ಇದೀಗ ಸ್ವತಂತ್ರ ವೈದ್ಯಕೀಯ ತಜ್ಞರು, ಮಕ್ಕಳ ವೈದ್ಯರು ಹಾಗೂ ಪೌಷ್ಠಿಕ ತಜ್ಞರು ಅಮಿತಾಬ್ ಬಚ್ಚನ್‌ಗೆ ಅನಾರೋಗ್ಯಕರ ಬಿಸ್ಕೆಟ್ ಜಾಹೀರಾತಿನಲ್ಲಿ ನಟಿಸದೆ ಇರುವಂತೆ ಮನವಿ ಮಾಡಿಕೊಂಡಿದ್ದಾರೆ.
ಅಮಿತಾಬ್ ಬಚ್ಚನ್ ಬಿಸ್ಕೆಟ್ ಜಾಹೀರಾತೊಂದರಲ್ಲಿ ನಟಿಸಿದ್ದಾರೆ. ಹೀಗಾಗಿ NAPi ಸಂಸ್ಥೆ ಎರಡನೇ ಬಾರಿಗೆ ಪತ್ರವನ್ನು ಬರೆದಿದ್ದಾರೆ. ಬಿಸ್ಕೆಟ್ ಜಾಹೀರಾತಿನಲ್ಲಿ ನಟಿಸಬೇಡಿ. ಇವು ಆರೋಗ್ಯದ ಮೇಲೆ ಪರಿಣಾಮ ಬೀರುತ್ತೆ ಎಂದು ಮನವಿ ಮಾಡಿಕೊಂಡಿದ್ದಾರೆ. ಅಲ್ಲದೆ ಅಲ್ಟ್ರಾ ಪ್ರೋಸೆಸ್ಡ್ ಆಹಾರವನ್ನೂ ಸಹ ಭವಿಷ್ಯದಲ್ಲಿ ಪ್ರಚಾರ ಮಾಡಬೇಡಿ ಎಂದು ಆ ಪತ್ರದಲ್ಲಿ ಹೇಳಿದ್ದಾರೆ.
ಬಿಗ್ ಬಿಗೆ ಪತ್ರದಲ್ಲಿ ಏನಿದೆ?
ಡಿಸೆಂಬರ್ 28ರಂದು ಬ್ರಿಟಾನಿಯ ಮಿಲ್ಕ್ ನಿಕಿಸ್’ ಉತ್ಪನ್ನವನ್ನು ಪ್ರಮೋಟ್ ಮಾಡುತ್ತಿರುವ ಸಲುವಾಗಿ ಇದೇ ತಂಡ ಮೊದಲನೇ ಬಾರಿಗೆ ಪತ್ರವನ್ನು ಬರೆದು ಮನವಿಯನ್ನು ಮಾಡಿಕೊಂಡಿತ್ತು. ಈಗ ಮತ್ತೊಂದು ಪತ್ರವನ್ನು ಬರೆದಿದೆ. NAPi ನಿಮ್ಮ ಬಳಿ ಮನವಿ ಮಾಡಿಕೊಳ್ಳುವುದೇನೆಂದರೆ, ಮುಂದಿನ ದಿನಗಳಲ್ಲಿಇವುಗಳನ್ನೂ ತಿರಸ್ಕರಿಸಿ. ಅಲ್ಟ್ರಾ ಪ್ರೋಸಸ್ಟ್ ಆಹಾರದ ಉತ್ಪನ್ನ ಅಥವಾ ಕೊಬ್ಬು/ಸಕ್ಕರೆ ಮತ್ತು ಉಪ್ಪು ಇರುವ ಉತ್ಪನ್ನದ ಜಾಹೀರಾತುಗಳಲ್ಲಿ ನಟಿಸಬೇಡಿ ಎಂದು ಜನವರಿ 11ರಂದು ಮತ್ತೊಂದು ಪತ್ರವನ್ನು ಬರೆದಿದೆ.ಅಲ್ಟ್ರಾ ಪ್ರೊಸೆಸ್ಡ್ ಆಹಾರ ಉತ್ಪನ್ನಗಳು ಏಕೆ ಹಾನಿಕಾರಕ ಅನ್ನೋದ ಮಾಹಿತಿಯನ್ನು ಪತ್ರದಲ್ಲಿ ಲಗತ್ತಿಸಲಾಗಿದೆ. ಶೇ.10ಕ್ಕಿಂತ ಹೆಚ್ಚು ಸಕ್ಕರೆ ಅಥವಾ ಸ್ಯಾಚುರೇಟೆಡ್ ಕೊಬ್ಬು ಇರುವ ಆಹಾರ ಉತ್ಪನ್ನ HFSS ಎಂದು ಪರಿಗಣಿಸಲಾಗುತ್ತೆ. ವ್ಯಕ್ತಿಯ ಆರೋಗ್ಯಕ್ಕೆ ಹಾನಿಕಾರಕ ಎನಿಸುವ ಉತ್ಪನ್ನದ ಜಾಹೀರಾತಿನಲ್ಲಿ ನಟಿಸಬೇಕಾ? ಬೇಡ್ವಾ? ಅನ್ನೋದನ್ನು ನಿರ್ಧಾರವನ್ನು ಪ್ರಜ್ಞಾಪೂರ್ವಕವಾಗಿ ತೆಗೆದುಕೊಳ್ಳಿ ಎಂದು ಪತ್ರದಲ್ಲಿ ಬರೆಯಲಾಗಿದೆ.