ಹೊಸ ದಿಗಂತ ಡಿಜಿಟಲ್ ಡೆಸ್ಕ್
ನ್ಯಾಯ ಬೇಕು ಮೋದಿ ಎಂಬ ಪೊಸ್ಟರ್ನೊಂದಿಗೆ 12 ಪ್ರಶ್ನೆಗಳನ್ನು ಮುಂದಿಟ್ಟು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಸರಣಿ ಟ್ವಿಟ್ ಮೂಲಕ ಪ್ರಧಾನಿ ಮೋದಿಯನ್ನು ಪ್ರಶ್ನಿಸಿದ್ದಾರೆ.
ಕಲಬುರಗಿ ಹಾಗೂ ಯಾದಗಿರಿಗೆ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಲು ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ 12 ಪ್ರಶ್ನೆಗಳನ್ನು ಮುಂದಿಟ್ಟಿದ್ದು, ನ್ಯಾಯ ಬೇಕು ಮೋದಿ ಎಂಬ ಪೊಸ್ಟರ್ ನೊಂದಿಗೆ ಪ್ರಶ್ನೆಗಳ ಸುರಿಮಳೆಯನ್ನೇ ಹರಿಸಿದ್ದಾರೆ.
ರಾಜ್ಯದಲ್ಲಿ ನಡೆದ ಪಿಎಸ್‌ಐ ನೇಮಕಾತಿ ಹಗರಣ, ಪಿಡಬ್ಲ್ಯುಡಿ ಸಹಾಯಕ ಎಂಜಿನಿಯರ್ ನೇಮಕಾತಿ ಹಗರಣಗಳ ಪ್ರಸ್ತಾಪ , ಶರಾವತಿ ಸಂತ್ರಸ್ಥ ಕುಟುಂಬಗಳ ಸಮಸ್ಯೆ, ಕೊರೊನಾ ಕಾಲದಲ್ಲಿ 3000 ಕೋಟಿ ಅವ್ಯವಹಾರ ಸೇರಿದಂತೆ ಒಟ್ಟು 12 ಪ್ರಶ್ನೆಗಳನ್ನು ಪ್ರಧಾನಿ ಮೋದಿಯವರ ಮುಂದಿಟ್ಟಿದ್ದಾರೆ ಮಾಜಿ ಸಿಎಂ ಸಿದ್ಧರಾಮಯ್ಯ.
#ನ್ಯಾಯಬೇಕು_ಮೋದಿ @narendramodi @PMOIndia pic.twitter.com/uuZ7QbPVF7
— Siddaramaiah (@siddaramaiah) January 19, 2023