ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಕ್ಕಳಿಗಾಗಿ ಪ್ರಾಣವನ್ನೇ ಪಣಕ್ಕಿಡುವ ಪೋಷಕರಿದ್ದಾರೆ. ಆದರೆ ತನ್ನ ರಕ್ತ ಹಂಚಿಕೊಂಡು ಹುಟ್ಟಿದ ಐದು ತಿಂಗಳ ಮಗುವನ್ನು ಅಮಾನವೀಯವಾಗಿ ಕಾಲುವೆಗೆ ಎಸೆದ ತಂದೆಯ ಬಗ್ಗೆ ತಿಳಿದರೆ, ನೀವು ಏನಂತೀರೋ? ತನ್ನ ಸರ್ಕಾರಿ ಉಳಿಸಿಕೊಳ್ಳಲು ಒಬ್ಬ ಕಿರಾಕರ ತಂದೆ-ತಾಯಿ ಜೊತೆಗೂಡಿ ಇಂತಹ ಹೇಯ ಕೆಲಸ ಮಾಡಿದ್ದಾರೆ. ಮಗುವನ್ನು ಕೊಂದರೆ ಕೆಲಸ ಖಾಯಂ ಆಗುವುದು ಹೇಗೆ? ಅಂತಿದ್ದೀರಾ? ಇದು ಅಲ್ಲಿನ ಸರ್ಕಾರ ತಂದಿರುವ ನಿಯಮ ಹಾಗಿದೆ.
ಸರ್ಕಾರಿ ಉದ್ಯೋಗಿ ಮೂರನೇ ಮಗುವನ್ನು ಹೊಂದಿದ್ದರೆ, ಅವರು ಸ್ವಯಂ ನಿವೃತ್ತಿ ತೆಗೆದುಕೊಳ್ಳಬೇಕು ಎಂಬ ನಿಬಂಧನೆಯನ್ನು ರಾಜಸ್ಥಾನ ಸರ್ಕಾರ ಮಾಡಿದೆ. ಈಗಾಗಲೇ ಸರ್ಕಾರಿ ಉದ್ಯೋಗದಲ್ಲಿರುವವರು ಮೂರನೇ ಮಗುವಿಗೆ ಜನ್ಮ ನೀಡಿದರೆ ಕೆಲಸ ಕಳೆದುಕೊಳ್ಳಬೇಕಾಗುತ್ತದೆ. ಸರ್ಕಾರ ಈ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುತ್ತಿದೆ.
ಬಿಕನೇರ್‌ನ 36 ವರ್ಷದ ಜವರ್ ಲಾಲ್ ಮೇಘವಾಲ್ ಸರ್ಕಾರಿ ಗುತ್ತಿಗೆ ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದಾರೆ. ಗುತ್ತಿಗೆ ಕೆಲಸ ಕಾಯಂ ಆಗುವ ಭರವಸೆಯೊಂದಿಗೆ ಕೆಲಸ ಮಾಡುತ್ತಿದ್ದಾರೆ. ಮೇಘವಾಲ್‌ಗೆ ಪತ್ನಿ ಮತ್ತು ಇಬ್ಬರು ಮಕ್ಕಳಿದ್ದಾರೆ. ಮೇಘವಾಲ್ ಅವರ ಪತ್ನಿ ಇತ್ತೀಚೆಗೆ ಮೂರನೇ ಮಗುವಿಗೆ ಜನ್ಮ ನೀಡಿದ್ದಾರೆ. ಮೂರನೇ ಮಗುವಾದ ಹೆಣ್ಣು ಮಗು ಹುಟ್ಟಿ ಐದು ತಿಂಗಳಾಗಿದೆ. ಈ ಯೋಜನೆಯಲ್ಲಿ ಮೂರನೇ ಮಗು ಇದ್ದರೆ ಸರ್ಕಾರಿ ನೌಕರಿಗೆ ಅರ್ಹರಲ್ಲ ಎಂಬ ವಿಷಯ ತಿಳಿದ ದಂಪತಿ ಮಗುವಿನ ಜೀವವನ್ನೇ ತೆಗೆದಿದ್ದಾರೆ.
ಐದು ತಿಂಗಳ ಮಗುವನ್ನು ತೆಗೆದುಕೊಂಡು ಹೋಗಿ ಛತ್ತರಗಢ ಪೊಲೀಸ್ ಠಾಣೆ ವ್ಯಾಪ್ತಿಯ ಕಾಲುವೆಗೆ ಎಸೆದಿದ್ದಾರೆ. ಮಗುವಿನ ಸಾವಿಗೆ ಕಾರಣರಾದ ಪೋಷಕರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಖಾಯಂ ಕೆಲಸಕ್ಕಾಗಿ ಆರೋಪಿ ತನ್ನ ಪತ್ನಿಯೊಂದಿಗೆ ಸೇರಿ ಈ ದುಷ್ಕೃತ್ಯ ಎಸಗಿದ್ದಾನೆ ಎಂದು ಬಿಕಾನೇರ್ ಪೊಲೀಸ್ ಅಧೀಕ್ಷಕ ಯೋಗೇಶ್ ಯಾದವ್ ಹೇಳಿದರು. ಮೇಘವಾಲ್ ಮತ್ತು ಅವರ ಪತ್ನಿ ಗೀತಾ ದೇವಿ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 302 ಮತ್ತು 120 ಬಿ ಅಡಿಯಲ್ಲಿ ಛತ್ತರ್‌ಗಢ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅವರನ್ನು ವಿಚಾರಣೆ ನಡೆಸಲಾಗುತ್ತಿದೆ.