WOW | ಅತಿ ಹೆಚ್ಚು ವಜ್ರಗಳಿಂದ ತಯಾರಾದ ವಾಚ್, ಭಾರತದ ಈ ಕೈಗಡಿಯಾರ ಮಾಡಿದೆ ವಿಶ್ವ ದಾಖಲೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅತಿ ಹೆಚ್ಚು ವಜ್ರಗಳನ್ನು ಬಳಸಿ ತಯಾರಿಸಲಾದ ವಜ್ರದ ಕೈಗಡಿಯಾರ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಪಡೆದುಕೊಂಡಿದೆ. ಭಾರತದ ರೆನಾನಿ ಜ್ಯುವೆಲ್ಸ್‌ನಲ್ಲಿ ತಯಾರಾದ ವಾಚ್‌ನಲ್ಲಿ ಒಟ್ಟಾರೆ 17, 524 ವಜ್ರಗಳಿವೆ. ಸತತ 11 ತಿಂಗಳ ಪ್ರಯತ್ನದ ಬಳಿಕ ವಜ್ರದ ವಾಚ್ ತಯಾರಾಗಿದ್ದು, ಗಿನ್ನಿಸ್ ಮಾನ್ಯತೆ ಪಡೆದುಕೊಂಡಿದೆ.

ಸಾಕಷ್ಟು ವಿನ್ಯಾಸ ಮಾಡಿ, ಧರಿಸಬಹುದಾದ ಹಾಗೂ ಆಕರ್ಷಕವಾದ ವಾಚ್ ಇದಾಗಿದೆ. ಈ ವಾಚ್‌ನಲ್ಲಿ 17,512 ವಜ್ರಗಳು ಹಾಗೂ 12 ರೇರ್ ಬ್ಲ್ಯಾಕ್ ಡೈಮಂಡ್ಸ್ ಇಡಲಾಗಿದೆ. ಇದು ಈ ಹಿಂದೆ ಹಾಂಗ್‌ಕಾಂಗ್‌ನಲ್ಲಿ ತಯಾರಾದ ವಜ್ರದ ಕೈಡಿಯಾರದ ದಾಖಲೆಯನ್ನು ಮುರಿದಿದೆ. ಅದರಲ್ಲಿ 15,858 ವಜ್ರಗಳಿದ್ದವು.

ಪ್ರಾರಂಭದಲ್ಲಿ ಕೈಗಳಿಂದ ವಿನ್ಯಾಸ ಮಾಡಿದ್ದು, ನಂತರ ತ್ರಿಡಿ ವಿನ್ಯಾಸ ಮಾಡಲಾಗಿದೆ, ವಾಚ್‌ಗೆ ಸ್ರಿಂಕಿಯಾ ಎಂದು ಹೆಸರಿಡಲಾಗಿದೆ, ಇದು ಪ್ರಾಚೀನ ಕಾಲದಲ್ಲಿ, ಪುರಾಣದಿಂದ ಪ್ರೇರಿತವಾದ ಹೂವಿನ ಹೆಸರಾಗಿದೆ.

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!