ಹೊಸದಿಗಂತ ಡಿಜಿಟಲ್ ಡೆಸ್ಕ್:
‘ಲೆಟ್ಸ್ ಗೆಟ್ ಮ್ಯಾರೀಡ್’ ಸಿನಿಮಾ ಮೂಲಕ ಕ್ರಿಕೆಟರ್ ಎಂ.ಎಸ್. ಧೋನಿ ನಿರ್ಮಾಣಕ್ಕೆ ಕೈ ಹಾಕಿದ್ದಾರೆ.
ಧೋನಿ ಎಂಟರ್ಟೈನ್ಮೆಂಟ್ನ ಮೊದಲ ಸಿನಿಮಾ ಇದಾಗಿದ್ದು, ತಮಿಳಿನಲ್ಲಿ ಸಿನಿಮಾ ತೆರೆ ಕಾಣಲಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮುನ್ನಡೆಸಿಕೊಂಡು ಬಂದಿದ್ದ ಧೋನಿ ಅವರಿಗೆ ತಮಿಳಿನಲ್ಲಿ ಭಾರೀ ಅಭಿಮಾನಿಗಳಿದ್ದಾರೆ. ಹಾಗಾಗಿ ತಮ್ಮ ಮೊದಲ ಸಿನಿಮಾವನ್ನು ದಕ್ಷಿಣದಲ್ಲೇ ಮಾಡೋಕೆ ಧೋನಿ ಮುಂದಾಗಿದ್ದಾರೆ.
ಸಿನಿಮಾ ಟೈಟಲ್ ರಿವೀಲ್ ಆಗಿದ್ದು, ಭಾರೀ ವೈರಲ್ ಆಗಿದೆ. ಇದೊಂದು ಪಕ್ಕಾ ಫ್ಯಾಮಿಲಿ ಎಂಟರ್ಟೈನ್ಮೆಂಟ್ ಸಿನಿಮಾ ಎಂದು ಹೇಳಲಾಗುತ್ತಿದೆ. ರಮೇಶ್ ತಮಿಳ್ಮಣಿ ಆಕ್ಷನ್ ಕಟ್ ಹೇಳುತ್ತಿದ್ದು, ಸಾಕ್ಷಿ ಸಿಂಗ್ ಧೋನಿ ನಿರ್ಮಾಣ ಮಾಡುತ್ತಿದ್ದಾರೆ.