ಪಂಜಾಬ್​ನಲ್ಲಿ 400 ಹೊಸ ಮೊಹಲ್ಲಾ ಕ್ಲಿನಿಕ್ ಆರಂಭ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಶುಕ್ರವಾರ 400 ಹೊಸ ‘ಆಮ್ ಆದ್ಮಿ’ ಚಿಕಿತ್ಸಾಲಯಗಳನ್ನು ರಾಜ್ಯದ ಜನತೆಗೆ ಅರ್ಪಿಸಿದ್ದಾರೆ.

ಈ ಹೊಸ ಕ್ಲಿನಿಕ್​ಗಳ ಆರಂಭದೊಂದಿಗೆ ಮೊಹಲ್ಲಾ ಕ್ಲಿನಿಕ್​ಗಳ ಒಟ್ಟು ಸಂಖ್ಯೆ 500 ಕ್ಕೆ ತಲುಪಿದೆ. ಈ ಸಂದರ್ಭ ಮಾತನಾಡಿದ ಕೇಜ್ರಿವಾಲ್, ಪಂಜಾಬ್‌ನಲ್ಲಿ ಎಎಪಿ ಸರ್ಕಾರ ಕೇವಲ 10 ತಿಂಗಳಲ್ಲಿ 500 ಮೊಹಲ್ಲಾ ಕ್ಲಿನಿಕ್‌ಗಳನ್ನು ತೆರೆದಿರುವುದು ತುಂಬಾ ಸಂತೋಷದ ವಿಷಯವಾಗಿದೆ ಎಂದರು. ಪಂಜಾಬ್‌ನಲ್ಲಿ 500 ಮೊಹಲ್ಲಾ ಚಿಕಿತ್ಸಾಲಯಗಳನ್ನು ಸ್ಥಾಪಿಸಲಾಗಿದ್ದು, ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಇಂತಹ ಇನ್ನಷ್ಟು ಸೌಲಭ್ಯಗಳು ಬರಲಿವೆ ಎಂದು ಕೇಜ್ರಿವಾಲ್ ಪಂಜಾಬ್​ ಜನತೆಗೆ ಭರವಸೆ ನೀಡಿದರು.
ಪಂಜಾಬ್ ಆರೋಗ್ಯ ಸಚಿವ ಬಲ್ಬೀರ್ ಸಿಂಗ್ ಮತ್ತು ಆಪ್ ಸಂಸದ ರಾಘವ್ ಚಡ್ಡಾ ಕೂಡಾ ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here