ಹೊಸದಿಗಂತ ಡಿಜಿಟಲ್ ಡೆಸ್ಕ್:
ರಶ್ಮಿಕಾ ಮಂದಣ್ಣ ಹಾಗೂ ಸಿದ್ಧಾರ್ಥ್ ಮಲ್ಹೋತ್ರ ಅಭಿನಯದ ಮಿಷನ್ ಮಜ್ನು ನೆಟ್‌ಫ್ಲಿಕ್ಸ್‌ನಲ್ಲಿ ರಿಲೀಸ್ ಆಗಿದೆ.
ಸದ್ಯ ನೆಟ್‌ಫ್ಲಿಕ್ಸ್‌ನ ನಂ.1 ಸ್ಥಾನದಲ್ಲಿ ಮಿಷನ್ ಮಜ್ನು ಫಿಕ್ಸ್ ಆಗಿದೆ. ರಶ್ಮಿಕಾ ಮೊದಲ ಬಾಲಿವುಡ್ ಸಿನಿಮಾ ಮಿಷನ್ ಮಜ್ನು ಆಗಬೇಕಿತ್ತು. ಆದರೆ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಿಂದ ಸಿನಿಮಾ ರಿಲೀಸ್ ಡಿಲೇ ಆಗಿತ್ತು.
ಎರಡನೇ ಸಿನಿಮಾ ಗುಡ್ ಬೈ ಮೊದಲೇ ರಿಲೀಸ್ ಆಯ್ತು, ಆದರೆ ಅಂದುಕೊಂಡಷ್ಟು ದೊಡ್ಡ ಮಟ್ಟದ ಹಿಟ್ ಆಗಲಿಲ್ಲ. ಇದೀಗ ಮಿಷನ್ ಮಜ್ನು ಸಿನಿಮಾ ಹಿಟ್ ಆಗಿದ್ದು, ಮುಂಬೈನಲ್ಲಿ ಸಕ್ಸಸ್ ಪಾರ್ಟಿಯಲ್ಲಿ ತಂಡ ಭಾಗಿಯಾಗಿದೆ. ರಶ್ಮಿಕಾ ಹಾಗೂ ಸಿದ್ಧಾರ್ಥ್ ಟ್ವಿನ್ನಿಂಗ್ ಉಡುಗೆ ಧರಿಸಿ ಮಿಂಚಿದ್ದಾರೆ.
ಸಿನಿಮಾದಲ್ಲಿ ರಶ್ಮಿಕಾ ಕುರುಡಿ ಪಾತ್ರ ಮಾಡಿದ್ದು, ನಿಭಾಯಿಸಿರುವ ರೀತಿಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ಇದೀಗ ಸದ್ಯಕ್ಕೆ ರಶ್ಮಿಕಾ ಅನಿಮಲ್ ಶೂಟಿಂಗ್‌ನಲ್ಲಿ ಬ್ಯುಸಿ ಇದ್ದಾರೆ.