ಸಿನಿಮಾ ಬಿಡುಗಡೆ ಕಂಡ 3ನೇ ದಿನಕ್ಕೆ 300 ಕೋಟಿ ಕಲೆಕ್ಷನ್​ ಮಾಡಿದ ಪಠಾಣ್​ ಸಿನಿಮಾ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಪಠಾಣ್​ ಸಿನಿಮಾ ಕಳೆದ ಮೂರು ದಿನಗಳಲ್ಲಿ ವಿಶ್ವಾದ್ಯಂತ 313 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿದೆ. ಸಿದ್ಧಾರ್ಥ್ ಆನಂದ್ ನಿರ್ದೇಶನದ ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್ ಅಭಿನಯದ ಪಠಾಣ್​ ಸಿನಿಮಾ ಹಿಂದಿ ಚಿತ್ರರಂಗದ ಇತಿಹಾಸದಲ್ಲಿ ಅತಿದೊಡ್ಡ ದಾಖಲೆ ನಿರ್ಮಿಸಿದೆ.

ಸಿನಿಮಾ ಬಿಡುಗಡೆ ಕಂಡ 3ನೇ ದಿನಕ್ಕೆ ವಿಶ್ವಾದ್ಯಂತ 313 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿದೆ. ಇಂದು ಮತ್ತು ನಾಳೆ ವಾರಾಂಂತ್ಯ ಹಿನ್ನೆಲೆ ಮತ್ತಷ್ಟು ಕೋಟಿ ಕಲೆಕ್ಷನ್ ಆಗಲಿರುವ ಭರವಸೆ ಚಿತ್ರತಂಡಕ್ಕಿದೆ.

ಶಾರುಖ್ ಖಾನ್, ದೀಪಿಕಾ ಪಡುಕೋಣೆ ಮತ್ತು ಜಾನ್ ಅಬ್ರಹಾಂ ಅಭಿನಯದ ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿದೆ. ಹೊರಗೆ ಪ್ರತಿಭಟನೆಯ ಕಾವಿದ್ದರೂ, ಸಿನಿಮಾ ತೆರೆ ಕಂಡಿರುವ ಬಹುತೇಕ ಚಿತ್ರಮಂದಿರದೊಳಗೆ ಭರ್ಜರಿ ಪ್ರದರ್ಶನ ನಡೆಯುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!