Wednesday, December 10, 2025

FOOD | ಬಟಾಣಿ ಮಸಾಲಾ: ಅನ್ನ, ಚಪಾತಿಗೆ ಹೇಳಿಮಾಡಿಸಿದ ಜೋಡಿ ನೋಡಿ!

ಬಟಾಣಿ ಮಸಾಲಾ ಎಂದರೆ ಮನೆಮಂದಿಗೆಲ್ಲ ಇಷ್ಟವಾಗುವ, ಊಟಕ್ಕೂ ರೊಟ್ಟಿಗೂ ಪರ್ಫೆಕ್ಟ್ ಆಗಿ ಹೊಂದಿಕೊಳ್ಳುವ ಸಾಂಪ್ರದಾಯಿಕ ಅಡುಗೆ. ಬೇಗ ತಯಾರಾಗುವದು, ಕಡಿಮೆ ಪದಾರ್ಥಗಳಿಂದಲೇ ಅದ್ಭುತ ರುಚಿ ನೀಡುವದು ಈ ಪದಾರ್ಥದ ವಿಶೇಷ. ಬಿಸಿಬಿಸಿ ಚಪಾತಿ, ಪೂರಿ ಅಥವಾ ಅನ್ನದ ಜೊತೆಗೆ ಬಟಾಣಿ ಮಸಾಲಾ ಮಾಡಿದರೆ ಊಟ ಇನ್ನಷ್ಟು ರುಚಿಯಾಗುತ್ತದೆ.

ಬೇಕಾಗುವ ಪದಾರ್ಥಗಳು

ಬಟಾಣಿ – 1 ಕಪ್
ಈರುಳ್ಳಿ – 2
ಟೊಮ್ಯಾಟೋ – 2
ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 ಟೀಸ್ಪೂನ್
ಹಸಿಮೆಣಸು – 1
ಎಣ್ಣೆ – 2 ಟೇಬಲ್ ಸ್ಪೂನ್
ಜೀರಿಗೆ – 1 ಟೀಸ್ಪೂನ್
ಧನಿಯಾ ಪುಡಿ – 1 ಟೀಸ್ಪೂನ್
ಸಬ್ಬಸಿಗೆ ಪುಡಿ – ½ ಟೀಸ್ಪೂನ್
ಮೆಣಸಿನ ಪುಡಿ – ರುಚಿಗೆ ತಕ್ಕಷ್ಟು
ಗರಂ ಮಸಾಲಾ – ½ ಟೀಸ್ಪೂನ್
ಉಪ್ಪು – ಅಗತ್ಯಕ್ಕೆ ತಕ್ಕಷ್ಟು

ಮಾಡುವ ವಿಧಾನ

ಒಂದು ಬಾಣಲೆಗೆ ಎಣ್ಣೆ ಹಾಕಿ ಬಿಸಿ ಮಾಡಿ, ಜೀರಿಗೆ ಹಾಕಿ ಸಿಡಿಬಿಟ್ಟ ನಂತರ ಈರುಳ್ಳಿ ಸೇರಿಸಿ ಗೋಲ್ಡನ್ ಬ್ರೌನ್ ಆಗುವವರೆಗೆ ಹುರಿಯಿರಿ. ನಂತರ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಗೂ ಹಸಿಮೆಣಸು ಹಾಕಿ ಒಂದು ನಿಮಿಷ ಕಲಸಿ. ಈಗ ಟೊಮ್ಯಾಟೋ ಪೇಸ್ಟ್ ಸೇರಿಸಿ ಎಣ್ಣೆ ಬಿಡುವವರೆಗೆ ಬೇಯಿಸಿ. ಮಸಾಲಾ ಪುಡಿಗಳು ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಕಲಸಿ. ಕೊನೆಗೆ ಬೇಯಿಸಿದ ಬಟಾಣಿ ಸೇರಿಸಿ ಸ್ವಲ್ಪ ನೀರು ಹಾಕಿ 5–7 ನಿಮಿಷ ಬೇಯಿಸಿದರೆ ರುಚಿಯಾದ ಬಟಾಣಿ ಮಸಾಲಾ ಸಿದ್ಧ. ಬಿಸಿಬಿಸಿ ಚಪಾತಿ ಅಥವಾ ಅನ್ನದ ಜೊತೆಗೆ ಸವಿಯಿರಿ.

error: Content is protected !!