ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಿಯಾಂಕಾ ಚೋಪ್ರಾ ಹಾಗೂ ನಿಕ್ ಜೋನಸ್ ಮಗಳು ಮಾಲ್ತಿಯ ಫೋಟೊವನ್ನು ಈ ವರೆಗೂ ದಂಪತಿ ರಿವೀಲ್ ಮಾಡಿರಲಿಲ್ಲ. ಮಗಳ ಮುಖಕ್ಕೆ ಹಾರ್ಟ್ ಈಮೋಜಿ ಮಾತ್ರ ಬಳಸುತ್ತಿದ್ದರು.
ಇದೀಗ ಮೊದಲ ಬಾರಿಗೆ ಪ್ರಿಯಾಂಕಾ ಮಗಳ ಫೋಟೊ ಹೊರಬಿದ್ದಿದೆ, ಫೋಟೊ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಮಗು ಎಷ್ಟು ಮುದ್ದಾಗಿದೆ ಎಂದು ಫ್ಯಾನ್ಸ್ ಹೇಳಿದ್ದಾರೆ.
ಬಾಡಿಗೆ ತಾಯ್ತನದ ಮೂಲಕ ಮಗು ಪಡೆದ ಜೋನಸ್ ದಂಪತಿ ಲಾಸ್ ಎಂಜಲಿಸ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದು, ಮಗಳ ಜೊತೆ ಫೋಟೊಗೆ ಪೋಸ್ ನೀಡಿದ್ದಾರೆ.