ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಾಕಿಸ್ತಾನದ ಪೇಶಾವರದಲ್ಲಿ ನಿನ್ನೆ ಮಧ್ಯಾಹ್ನ ಆತ್ಮಹತ್ಯಾ ಬಾಂಬ್ ದಾಳಿ ನಡೆದಿದ್ದು, ಸ್ಫೋಟದಲ್ಲಿ ಮೃತಪಟ್ಟವರ ಸಂಖ್ಯೆ 83ಕ್ಕೆ ಏರಿಕೆಯಾಗಿದೆ.
ಸ್ಫೋಟದಲ್ಲಿ 57 ಮಂದಿ ಗಾಯಗೊಂಡಿದ್ದು, ಹಲವರ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ. ಪೊಲೀಸ್ ಪ್ರಧಾನ ಕಚೇರಿ ಬಳಿ ಇರುವ ಬಿಗಿ ಭದ್ರತೆಯ ಮಸೀದಿಯಲ್ಲಿ ಪ್ರಾರ್ಥನೆ ವೇಳೆ ಆತ್ಮಹತ್ಯಾ ಬಾಂಬರ್ ತನ್ನನ್ನು ತಾನು ಸ್ಫೋಟಿಸಿಕೊಂಡಿದ್ದಾನೆ.
ನಾಲ್ಕು ಹಂತದ ಭದ್ರತೆಯನ್ನು ಬೇಧಿಸಿ ಮಸೀದಿ ಒಳಬಂದಿದ್ದ ಎನ್ನಲಾಗಿದೆ. ಮಸೀದಿಯ ಒಳಗೆ 400ಕ್ಕೂ ಹೆಚ್ಚು ಪೊಲೀಸರು ಇದ್ದರು ಎನ್ನಲಾಗಿದೆ. ಸ್ಫೋಟದ ತೀವ್ರತೆಗೆ ಗೋಡೆ ಕುಸಿದುಬಿದ್ದಿದ್ದು, ಇದರ ಅಡಿ ಇನ್ನಷ್ಟು ಮೃತದೇಹಗಳು ಇರುವ ಆತಂಕ ಇದೆ ಎನ್ನಲಾಗಿದೆ.