- ಮೇಘನಾ ಶೆಟ್ಟಿ, ಶಿವಮೊಗ್ಗ
ಇವತ್ತು ಏನೋ ಡಿಫ್ರೆಂಟ್ ಆಗಿ ಕಾಣ್ತಿದ್ಯಾ? ಐ ಬ್ರೋ ಮಾಡಿಸ್ದ್ಯಾ? ಸಖತ್ ಆಗ್ ಕಾಣ್ತಾ ಇದೆ, ಅಮ್ಮ ಇವತ್ ಪವಾಲ್ ಸೂಪರ್ ಆಗ್ ಆಗಿದೆ, ಅಪ್ಪ ಏನ್ ಗಾಡಿ ಇಷ್ಟು ಹೊಳಿತಿದೆ, ಚೆನ್ನಾಗ್ ವಾಶ್ ಮಾಡಿದಿರಿ, ಪುಟ್ಟು ನಿನ್ ಹ್ಯಾಂಡ್ ರೈಟಿಂಗ್ ಎಷ್ಟ್ ಚಂದ ಇದೆ..
ಒಂದೇ ಒಂದು ಹೊಗಳಿಗೆ ಮಾತನ್ನು ಆಡೋದಕ್ಕೆ ಅಷ್ಟು ಕಷ್ಟವಾ? ಒಂದು ದಿನದಲ್ಲಿ ಎಷ್ಟೇ ನೆಗೆಟಿವ್ ವಿಷಯಗಳಿದ್ದರೂ ಒಂದು ಪಾಸಿಟಿವ್ ಕಮೆಂಟ್ ಸದಾ ನೆನಪಿರುತ್ತದೆ. ಸುಸ್ತಾಗಿ ಮನೆಗೆ ಹೋಗುವಾಗ, ಬಸ್‌ನಲ್ಲಿ ಆಂಟಿ ನಿನ್ ಕೂದ್ಲು ಎಷ್ಟ್ ಚನಾಗಿದೆ ಹೇಗೆ ನೋಡ್ಕೋತ್ಯಮ್ಮ ಅಂತ ಕೇಳಿದ್ರೆ ಎಷ್ಟು ಖುಷಿ ಅಲ್ವಾ? ಅವರ‍್ಯಾರು ಗೊತ್ತಿಲ್ಲ, ಮತ್ತೆ ಸಿಗ್ತಾರಾ ಗೊತ್ತಿಲ್ಲ. ಜೀವನದ ಒಂದು ಕ್ಷಣವನ್ನು ಅವರು ಸರಿಯಾಗಿ ಉಪಯೋಗಿಸಿಕೊಂಡಿದ್ದಾರೆ ಅಷ್ಟೆ.
ಜನರನ್ನು ಯಾಕೆ ಹೊಗಳಬೇಕು?
ಹೊಗಳಿಕೆಗೆ ಮನಸೋಲದವರಿಲ್ಲ, ಆದರೆ ಅದೇ ಜಾಸ್ತಿ ಆದರೆ ಫೇಕ್ ಅಂದುಕೊಳ್ಳೋರ ಸಂಖ್ಯೆಯೂ ಕಡಿಮೆ ಇಲ್ಲ. ಹೊಗಳಿಕೆ ಹೇಗಿರಬೇಕು ಅಂದರೆ ಮನಸ್ಸಿನಿಂದ ಬಂದರೆ ಹೋಲ್ಡ್ ಮಾಡುವಂತೆ ಇರಬಾರದು, ಇದು ಹೆಚ್ಚಾದರೆ ಬಕೆಟ್ ಎನಿಸಿಕೊಳ್ಳುವ ಭಯವೂ ಇದೆ ನೆನಪಿರಲಿ.
ಒಂದು ಕೆಟ್ಟ ದಿನವನ್ನು ನೆನಪಿನಲ್ಲಿಟ್ಟುಕೊಳ್ಳುವಂತೆ ಮಾಡೋ ತಾಕತ್ತು ಹೊಗಳಿಕೆಯಲ್ಲಿದೆ. ನೀವೇ ಊಹಿಸಿ, ನಿಮ್ಮ ಕ್ರಶ್ ಕಡೆಯಿಂದ ಸಣ್ಣ ಕಾಂಪ್ಲಿಮೆಂಟ್ ಸಿಕ್ಕರೆ ಹೊಟ್ಟೆಯೊಳಗೆ ಬಟರ್‌ಫ್ಲೈ ಫೀಲಿಂಗ್ ಬರೋದಿಲ್ವಾ?
ನಿಮ್ಮ ಗಂಟೇನು ಹೋಗತ್ತೆ?
ಎದುರಿನಲ್ಲಿ ನಿಮ್ಮ ಕೊಲೀಗ್ ನಿಂತಿದ್ದಾರೆ, ಹೆಚ್ಚು ಬಾರಿ ಮಾತನಾಡಿಸಿಲ್ಲ, ಆದರೆ ಅವರು ಮೀಟಿಂಗ್‌ನಲ್ಲಿ ಇಟ್ಟ ಪಾಯಿಂಟ್‌ಗೆ ನೀವು ಫ್ಯಾನ್ ಆಗಿದ್ದೀರಿ, ಹತ್ತಿರ ಹೋಗಿ ನಿಮ್ಮ ಪಾಯಿಂಟ್ ವ್ಯಾಲಿಡ್ ಆಗಿತ್ತು, ಯು ವರ್ ಗುಡ್ ಅನ್ನಬೇಕು ಅನಿಸಿದರೆ ನಿಮ್ಮನ್ನು ನೀವು ತಡೆದುಕೊಳ್ಳೋದು ಯಾಕೆ? ಹೋಗಿ ಹೇಳಿಬಿಡಿ, ಆಲ್‌ಮೋಸ್ಟ್ ಥ್ಯಾಂಕ್ಯೂ ಅಂದು ಮಾತು ಮುಂದುವರಿಸುತ್ತಾರೆ, ಇಲ್ಲವೇ ಥ್ಯಾಂಕ್ಯೂ ಎಂದು ಮುಂದೆ ಹೋಗುತ್ತಾರೆ! ನಿಮಗೆ ಅನಿಸಿದ್ದನ್ನು ನೀವು ಹೇಳಿದ್ರಿ ಅಷ್ಟೆ ಅಲ್ವಾ?
ಕಾಂಪ್ಲಿಮೆಂಟ್ ಮಾಡೋದು ಯಾಕೆ ಒಳ್ಳೆಯದು? ಇಲ್ಲಿದೆ ಐದು ಸ್ಟ್ರಾಂಗ್ ರೀಸನ್ಸ್..
ಹೊಗಳೋದ್ರಿಂದ ನಿಮ್ಮ ಖುಷಿಯೂ ಹೆಚ್ಚುತ್ತದೆ. ಇದು ನಾವು ಹೇಳ್ತಿರೋದಲ್ಲ, ರಿಸರ್ಚ್‌ನಿಂದ ತಿಳಿದುಬಂದಿದ್ದು. ಯಾರಿಗೋ ಯಾವುದೋ ಕೆಲಸಕ್ಕೆ ಖುಷಿಯಿಂದ ಹೊಗಳಿದ್ರೆ ಅವರ ಖುಷಿ, ನಿಮ್ಮ ಖುಷಿ ಎರಡೂ ಹೆಚ್ಚುತ್ತದೆ.
ಹೊಗಳಿಕೆಯಿಂದ ನಿಮ್ಮ ಸಂಬಂಧ ಗಟ್ಟಿಯಾಗುತ್ತದೆ. ಸಾಮಾಜಿಕ ಜಾಲತಾಣದಲ್ಲಿ ನಿಮ್ಮ ಸ್ನೇಹಿತರು ಯಾವುದೋ ಪೋಸ್ಟ್ ಹಾಕಬಹುದು, ಮನಸ್ಸಿನಲ್ಲಿ ಎಷ್ಟ್ ಚನಾಗ್ ಕಾಣ್ತಾ ಇದಾನೆ ಅಂದುಕೊಳ್ಳುವ ಬದಲು, ಲುಕ್ಕಿಂಗ್ ಗ್ರೇಟ್ ಅನ್ನುವ ಕಮೆಂಟ್ ಹಾಕೋದು ಈಸಿ ಅಲ್ವಾ? ಇದರಿಂದ ಅವರಿಗೂ ಖುಷಿ, ನಿಮ್ಮಿಬ್ಬರ ಸಂಬಂಧವೂ ಚೆನ್ನಾಗಿಯೇ ಇರುತ್ತದೆ.
ಇರುವುದನ್ನು ಇರುವಂತೆ ಹೇಳುವುದರಿಂದ ನೀವು ರಿಯಲ್ ಪರ್ಸನ್ ಎನಿಸಿಕೊಳ್ತೀರಿ. ಸುಮ್ ಸುಮ್ನೆ ಎಲ್ಲಾರ‍್ನೂ, ಎಲ್ಲಾದಕ್ಕೂ ಹೊಗಳೋದಿಲ್ಲ. ಅನಿಸಿದಾಗ ಮಾತ್ರ ಹೊಗಳ್ತಾರೆ ಎನ್ನುವ ಒಪಿನಿಯನ್ ನಿಮ್ಮ ಮೇಲೆ ಬರುತ್ತದೆ.
ರಿಸರ್ಚ್ ಪ್ರಕಾರ ಉತ್ತಮ, ಖುಷಿಯಾದ ಕಾಂಪ್ಲಿಮೆಂಟ್‌ಗಳನ್ನು ಕೊಡುವುದರಿಂದ ಒತ್ತಡ ನಿವಾರಣೆಯಾಗುತ್ತದಂತೆ, ದೈಹಿಕ ಆರೋಗ್ಯವೂ ಚೆನ್ನಾಗಿರುತ್ತದಂತೆ.
ನೀವು ಹೋದಲ್ಲೆಲ್ಲಾ ಪಾಸಿಟಿವಿಟಿ ಹರಡಿಸೋಕೆ ಇದಕ್ಕಿಂತ ಬೇರೆ ಅವಕಾಶ ಬೇಕಾ? ಒಂದು ಪಾಸಿಟಿವ್ ಕಮೆಂಟ್ ವಾತಾವರಣವನ್ನೇ ಬದಲಾಯಿಸುತ್ತದೆ.
ಅನಿಸಿದ್ದನ್ನು, ಅನಿಸಿದ ಸಮಯಕ್ಕೇ ಹೇಳಿಬಿಡಿ, ಇಲ್ಲಿ ನೀವು ಕಳೆದುಕೊಳ್ಳುವುದು ಏನಿಲ್ಲ. ಗಳಿಕೆಯೇ ಜಾಸ್ತಿ, ಹೆಚ್ಚು ಸ್ನೇಹಿತರು, ಗಟ್ಟಿಯಾದ ಸಂಬಂಧ ನಿಮ್ಮದಾಗುತ್ತದೆ. ಬಹುಕಾಲದ ಸಂಬಂಧಗಳನ್ನು ಗ್ರಾಂಟೆಡ್ ಆಗಿ ತೆಗೆದುಕೊಳ್ಳುವ ಮುನ್ನ ಆಗಾಗ ನಿಮ್ಮ ಸಂಗಾತಿಗೆ ಹೊಗಳಿ. ಇದು ನಿಮ್ಮ ಸಂಬಂಧ ಆರೋಗ್ಯಕರವಾಗಿರುವಂತೆ ಕಾಪಾಡುತ್ತದೆ.