ಐದು ಮರಿಗಳ ಜೊತೆ ‘ಡಿಜೆ’ ವಾಕ್ ಕಂಡು ಪ್ರವಾಸಿಗರು ಖುಷ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಮಧ್ಯಪ್ರದೇಶದ ಕನ್ಹಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ (ಕೆಟಿಆರ್) ಹುಲಿಯೊಂದು ಐದು ಮರಿಗಳಿಗೆ ಜನ್ಮ ನೀಡಿದೆ.

ಮಂಡ್ಲಾ ಜಿಲ್ಲೆಯ ಮೀಸಲು ಪ್ರದೇಶದ ಮುಕ್ಕಿ ವಲಯದಲ್ಲಿ ಶನಿವಾರ ಮೊದಲ ಬಾರಿಗೆ ಐದು ಮರಿಗಳೊಂದಿಗೆ ಟಿ-27 ಹೆಸರಿನ ಹುಲಿ ಕಾಣಿಸಿಕೊಂಡಿದೆ ಎಂದು ಕನ್ಹಾ ಹುಲಿ ಸಂರಕ್ಷಿತ ಪ್ರದೇಶದ ಕ್ಷೇತ್ರ ನಿರ್ದೇಶಕ ಎಸ್‌.ಕೆ. ಸಿಂಗ್ ತಿಳಿಸಿದ್ದಾರೆ.

ಒಂಬತ್ತು ವಯಸ್ಸಿನ ಹುಲಿ ಕಳೆದ ವರ್ಷ ನವೆಂಬರ್‌ನಲ್ಲಿ ಮರಿಗಳಿಗೆ ಜನ್ಮ ನೀಡಿದೆ. ಈ ಮರಿಗಳಿಗೆ ಈಗ ಸುಮಾರು ಮೂರು ತಿಂಗಳ ವಯಸ್ಸಾಗಿದೆ ಎಂದು ಕೆಟಿಆರ್‌ನ ಹಿರಿಯ ವನ್ಯಜೀವಿ ಪಶುವೈದ್ಯ ಸಂದೀಪ್ ಅಗರವಾಲ್ ಹೇಳಿದ್ದಾರೆ.ಇದನ್ನು ಡಿಜೆ ಎಂದೂ ಕರೆಯಲಾಗುತ್ತದೆ ಎಂದು ತಿಳಿದುಬಂದಿದೆ.

ಪ್ರವಾಸಿಗರು ಮರಿಗಳೊಂದಿಗೆ ಡಿಜೆ ಎಂದು ಜನಪ್ರಿಯವಾಗಿರುವ ಹುಲಿಯನ್ನು ನೋಡಿ ಉತ್ಸುಕರಾಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!