ಹಿಮಾಚಲ ಪ್ರದೇಶದಲ್ಲಿ ಹಿಮಪಾತ: 479 ರಸ್ತೆಗಳು ಬಂದ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಹಿಮಾಚಲ ಪ್ರದೇಶದಲ್ಲಿ (Himachal Pradesh) ಹಿಮಪಾತದಿಂದಾಗಿ (Snowfall) 3 ರಾಷ್ಟ್ರೀಯ ಹೆದ್ದಾರಿಗಳು ಸೇರಿದಂತೆ 479 ರಸ್ತೆಗಳಲ್ಲಿ ಸಂಚಾರವನ್ನು ನಿರ್ಬಂಧಿಸಲಾಗಿದೆ.

ಶಿಮ್ಲಾದಲ್ಲಿ ಗರಿಷ್ಠ 180 ರಸ್ತೆಗಳನ್ನು ಬ್ಲಾಕ್ ಮಾಡಲಾಗಿದೆ. ಅವುಗಳಲ್ಲಿ 150 ಲಾಹೌಲ್ , 72 ಕಿನ್ನೌರ್‌ನಲ್ಲಿ, 35 ಕುಲುದಲ್ಲಿ, 27 ಚಂಬಾದಲ್ಲಿ, 8 ಮಂಡಿಯಲ್ಲಿ ಮತ್ತು ಕಂಗ್ರಾ ಮತ್ತು ಸಿರ್ಮೌರ್ ಜಿಲ್ಲೆಗಳಲ್ಲಿ ತಲಾ 2 ರಸ್ತೆಗಳು ಬಂದ್ ಆಗಿವೆ.

ರಾಜ್ಯ ತುರ್ತು ಕಾರ್ಯಾಚರಣೆ ಅಂಕಿ-ಅಂಶಗಳ ಪ್ರಕಾರ, 697 ಟ್ರಾನ್ಸ್‌ಫಾರ್ಮರ್‌ಗಳು ಸಹ ಸ್ಥಗಿತಗೊಂಡಿವೆ. ರಸ್ತೆ ಒತ್ತುವರಿ ತೆರವು ಕಾರ್ಯ ಭರದಿಂದ ಸಾಗಿದೆ ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಬುಡಕಟ್ಟು ಜನಾಂಗದ ಕಿನ್ನೌರ್‌ನ ಪೂಹ್ ಮತ್ತು ಕಲ್ಪಾದಲ್ಲಿ 11 ಸೆಂ.ಮೀ ಮತ್ತು 8.6 ಸೆಂ.ಮೀ ಹಿಮಪಾತವಾಗಿದೆ. ಶಿಮ್ಲಾ ಜಿಲ್ಲೆಯ ಖದ್ರಾಲಾದಲ್ಲಿ 6 ಸೆಂ.ಮೀ ಮತ್ತು ಕುಕುಮ್‌ಸೇರಿ ಮತ್ತು ಲಾಹೌಲ್‌ನ ಕೀಲಾಂಗ್ ಮತ್ತು ಸ್ಪಿತಿಯಲ್ಲಿ ಕ್ರಮವಾಗಿ 4.8 ಮತ್ತು 3 ಸೆಂ.ಮೀ. ಹಿಮಪಾತವಾಗಿದೆ.

ಚಂಬಾದಲ್ಲಿ 55.5 ಮಿ.ಮೀ ಮಳೆಯಾಗಿದ್ದು, ಧರ್ಮಶಾಲಾದಲ್ಲಿ 25.3 ಮಿ.ಮೀ, ಕಂಗ್ರಾದಲ್ಲಿ 20.6 ಮಿ.ಮೀ, ಮನಾಲಿಯಲ್ಲಿ 9 ಮಿ.ಮೀ ಮತ್ತು ಪಾಲಂಪೂರ್‌ನಲ್ಲಿ ಕ್ರಮವಾಗಿ 6.6 ಮಿ.ಮೀ ಮಳೆಯಾಗಿದೆ. ಹಿಮಾಚಲ ಪ್ರದೇಶದಲ್ಲಿ ಸರಾಸರಿ 86.2 ಮಿ.ಮೀ ಮಳೆಯಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!