15 ವರ್ಷದ ಬಾಲಕನ ಮೇಲೆ 32ರ ಮಹಿಳೆಯಿಂದ ಲೈಂಗಿಕ ದೌರ್ಜನ್ಯ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

15 ವರ್ಷದ ಬಾಲಕನ ಮೇಲೆ ಮಹಿಳೆಯೊಬ್ಬಳು ಲೈಂಗಿಕ ದೌರ್ಜನ್ಯ (Sexual Abuse) ಎಸಗಿರುವ ಘಟನೆ ಮಹಾರಾಷ್ಟ್ರದ ನಾಸಿಕ್‌ ಜಿಲ್ಲೆಯಲ್ಲಿ ನಡೆದಿದೆ.

ಈ ಸಂಬಂಧ ಮಹಿಳೆಯ ವಿರುದ್ಧ ಪೋಸ್ಕೋ ಕಾನೂನಿನ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

32 ವರ್ಷದ ವಿವಾಹಿತ ಮಹಿಳೆ ಬಾಲಕನ ಕುಟುಂಬಕ್ಕೆ ಪರಿಚಯಸ್ಥಳಾಗಿದ್ದು, ನಾಸಿಕ್‌ನ ಕಲ್ಯಾಣ್‌ದಲ್ಲಿರುವ ಅವರ ಮನೆಗೆ ಬಂದಿದ್ದಳು. ಆಗಲೇ ಆಕೆಗೆ ಬಾಲಕನ ಮೇಲೆ ಪ್ರೀತಿ ಹುಟ್ಟಿದ್ದು, ಬಾಲಕನಿಗೆ ತನ್ನೊಂದಿಗೆ ದೈಹಿಕ ಸಂಬಂಧ ಇಟ್ಟುಕೊಳ್ಳುವಂತೆ ಒತ್ತಾಯಿಸಿ, ಬಾಲಕನಿಗೆ 20,000 ರೂ. ಮೌಲ್ಯದ ಫೋನ್‌ ಅನ್ನೂ ಕೊಡಿಸಿದ್ದಾಳೆ.

ಮಹಿಳೆಯು ಬಾಲಕನ ಮನೆಯಿಂದ ಹೋದ ನಂತರವೂ ಆತನಿಗೆ ಕರೆ ಮಾಡಿ ಸಂಪರ್ಕ ಬೆಳೆಸಿದ್ದಾಳೆ. ಬಾಲಕನ ನಡವಳಿಕೆಯಲ್ಲಿ ಬದಲಾವಣೆ ಕಂಡುಬಂದ ಹಿನ್ನೆಲೆ ಪೋಷಕರು ನಿಜಾಂಶವನ್ನು ತಿಳಿದುಕೊಳ್ಳಲು ಯತ್ನಿಸಿದ್ದಾರೆ. ಶಾಲೆಯ ಶಿಕ್ಷಕರ ಸಹಾಯವನ್ನೂ ಪಡೆದುಕೊಳ್ಳಲಾಗಿದೆ. ಶಿಕ್ಷಕರು ಬಾಲಕನನ್ನು ಕರೆದು ವಿಚಾರಿಸಿದಾಗ ಆತ ನಡೆದ ವಿಚಾರ ತಿಳಿಸಿದ್ದಾನೆ.

ಈ ವಿಚಾರವಾಗಿ ಬಾಲಕನ ಪೋಷಕರು ಮಹಿಳೆಗೆ ಎಚ್ಚರಿಕೆ ನೀಡಿದ್ದು, ಸಂಪರ್ಕ ಮಾಡದಿರುವಂತೆ ತಿಳಿಸಿದ್ದಾರೆ. ಆದರೂ ಸುಮ್ಮನಾಗದ ಮಹಿಳೆ ಬಾಲಕನನ್ನು ಸಂಪರ್ಕಿಸಿದ್ದು, ಆತನನ್ನು ಭೇಟಿಯಾಗಿರುವುದಾಗಿಯೂ ಹೇಳಲಾಗಿದೆ. ಆ ಹಿನ್ನೆಲೆ ಪೋಷಕರು ಮಹಿಳೆಯ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!