ಕಂಬಳದಲ್ಲಿ ಗಲಾಟೆ: ಸ್ಪಷ್ಟನೆ ನೀಡಿದ ನಟಿ ಸಾನ್ಯಾ ಐಯ್ಯರ್​!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಬಿಗ್ ಬಾಸ್ ಮೂಲಕ ಮನೆ ಮಾತಾದ ನಟಿ ಸಾನ್ಯಾ ಐಯ್ಯರ್​ ಅವರು ಇದೀಗ ಹೊಸ ವಿವಾದದಲ್ಲಿ ಸಿಲುಕಿದ್ದಾರೆ.

ಇತ್ತೀಚೆಗೆ ಕಂಬಳ (Kambala) ವೀಕ್ಷಿಸಲು ಅವರು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿಗೆ ತೆರಳಿದ್ದಾಗ ಯುವಕನೊಬ್ಬನ ಜೊತೆ ಜಗಳ ಆಗಿದೆ. ಆ ಗಲಾಟೆ ಕುರಿತು ಹಲವಾರು ಸುದ್ದಿಗಳು ಹಬ್ಬಿವೆ.

ಇದೀಗ ಈ ಕುರಿತು ಸ್ಪಷ್ಟನೆ ನೀಡಲು ಸಾನ್ಯಾ ಐಯ್ಯರ್​ ಅವರು ತುರ್ತು ಸುದ್ದಿಗೋಷ್ಠಿ ಕರೆದಿದ್ದಾರೆ. ಈ ವೇಳೆ ಅವರು ಅನೇಕ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ.

ಪುತ್ತೂರಿಗೆ ನಾವು ಕಂಬಳ ನೋಡಲು ಹೋಗಿದ್ವಿ. ನನ್ನನ್ನು ಅತಿಥಿಯಾಗಿ ಕರೆದಿದ್ದರು. ಆ ಸಾಂಸ್ಕೃತಿಕ ಕ್ರೀಡೆಯನ್ನು ಸರಿಯಾಗಿ ನೋಡಲು ಸಾಧ್ಯವಾಗಿರಲಿಲ್ಲ. ಮತ್ತೆ ಸ್ನೇಹಿತೆಯರ ಜೊತೆ ಕಂಬಳ ನೋಡಲು ಬಂದೆ. ಆಗ ನಶೆಯಲ್ಲಿ ಇದ್ದ ಓರ್ವ ಯುವಕ ಕಿರುಕುಳ ನೀಡಲು ಪ್ರಯತ್ನಿಸಿದ. ಆಗ ನಾವು ಜೋರಾಗಿ ಕಿರುಚಿಕೊಂಡೆವು’ ಎಂದು ಸಾನ್ಯಾ ಅಯ್ಯರ್​ (Sanya Iyer) ಹೇಳಿದ್ದಾರೆ.

ಆ ಹುಡುಗ ಯಾರು, ಅವರ ಹೆಸರು ಏನು ಎಂಬುದು ಕೂಡ ನಮಗೆ ತಿಳಿದಿಲ್ಲ. ಬಂದು ಮೈಮೇಲೆ ಬಿದ್ದ. ನಾವು ಕಿರುಚಿದ್ದಕ್ಕೆ ಜನರು ಸೇರಿದರು. ಆಗ ಅವನು ಎಸ್ಕೇಪ್​ ಆದ. ನಮ್ಮ ಕೈಗೆ ಸಿಗಲಿಲ್ಲ. ನಾವು ಬರುತ್ತೇವೆ ಎಂಬುದನ್ನು ಮುಖ್ಯ ಆಯೋಜಕರಿಗೆ ನಾವು ತಿಳಿಸಿರಲಿಲ್ಲ. ಒಂದು ವೇಳೆ ತಿಳಿಸಿದ್ದರೆ ಅವರು ಸರಿಯಾಗಿ ಕರೆದುಕೊಂಡು ಹೋಗುತ್ತಿದ್ದರು. ಈ ಘಟನೆ ಆದ ಬಳಿಕ ಅವರಿಗೆ ವಿಷಯ ತಿಳಿಯಿತು. ಆಮೇಲೆ ಅವರು ಬಂದು ನಮ್ಮನ್ನು ಸುರಕ್ಷಿತವಾಗಿ ಕರೆದುಕೊಂಡು ಹೋಗಿ ವೇದಿಕೆ ಮೇಲೆ ಕೂರಿಸಿದರು ಎಂದು ​ ಹೇಳಿದ್ದಾರೆ.

ಇನ್ನು ಕಂಬಳಕ್ಕೆ ಬರುವಾಗ ಸಾನ್ಯಾ ​ ಅವರು ತಮ್ಮ ಸ್ನೇಹಿತರ ಜೊತೆ ಸೇರಿ ಮದ್ಯಪಾನ ಮಾಡಿದ್ದರು ಎಂಬ ಆರೋಪ ಎದುರಾಗಿದೆ. ಆ ಬಗ್ಗೆ ಅವರು ಸ್ಪಷ್ಟನೆ ನೀಡಿದ್ದಾರೆ. ‘ಖಂಡಿತವಾಗಿಯೂ ನಾನು ಮದ್ಯಪಾನ ಮಾಡಿಲ್ಲ. ಬಾಂಬೆಯಲ್ಲಿ ನನ್ನ ಶೂಟಿಂಗ್​ ಇದೆ. ಅದಕ್ಕಾಗಿ ನಾನು ಜೀರೋ ಶುಗರ್​ ಡಯೆಟ್​ ಮಾಡುತ್ತಿದ್ದೇನೆ. ಅಂಥದ್ದರಲ್ಲಿ ಮದ್ಯಪಾನ ಹೇಗೆ ಮಾಡಲಿ? ನಾನು ರುದ್ರಾಕ್ಷಿ ಧರಿಸಿದ್ದೇನೆ. ಹಾಗಾಗಿ ಮದ್ಯಪಾನ, ಧೂಮಪಾನ ಮಾಡಲ್ಲ. ನಾವು ಹೋಗಿದ್ದು ಪವಿತ್ರವಾದ ಸ್ಥಳಕ್ಕೆ ಅಲ್ಲಿ ದೇವಸ್ಥಾನಗಳು ಇವೆ. ಅಲ್ಲಿ ಎಂಜಾಯ್​ ಮಾಡೋಕೆ ನಾವು ಹೋಗಿರಲಿಲ್ಲ ಎಂದು ಸಾನ್ಯಾ ಐಯ್ಯರ್​ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!