ಹೊಸದಿಗಂತ ಡಿಜಿಟಲ್ ಡೆಸ್ಕ್:
ಒಬ್ಬ ವೇಟರ್ ಒಂದೇ ಕೈಯಲ್ಲಿ 16 ದೋಸೆ ತಟ್ಟೆಗಳನ್ನು ಹಿಡಿದು ಗ್ರಾಹಕರಿಗೆ ನೀಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಹೋಟೆಲ್, ರೆಸ್ಟೊರೆಂಟ್ ಗಳಲ್ಲಿ ಕೆಲಸಗಾರರು ತಟ್ಟೆಗಳನ್ನು ಕೈಯಿಂದ ತಿರುಗಿಸಿ ಬೀಳದೆ ಹಿಡಿದುಕೊಳ್ಳುವ ಮತ್ತಿನ್ನೇನೋ ವ್ಹಾವ್ ಎನ್ನುವಂತಹ ಮ್ಯಾಜಿಕ್ ಮಾಡುತ್ತಿರುತ್ತಾರೆ.
ಈ ವಿಡಿಯೋದಲ್ಲಿ ವೇಟರ್ ಒಬ್ಬರು 16ದೋಸೆ ತಟ್ಟೆಗಳನ್ನು ಒಂದರ ಮೇಲೊಂದು ಹಿಡಿದು ಕೆಳಗೆ ಬೀಳದಂತೆ ಗ್ರಾಹಕರುಗೆ ಸರ್ವ್ ಮಾಡಿರುವ ದೃಶ್ಯವನ್ನು ಮಹೀಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರಾ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಈತನ ಕೆಲಸವನ್ನು ಒಲಂಪಿಕ್ ಕ್ರೀಡೆಯಾಗಿ ಗುರುತಿಸಬೇಕು. ಹಾಗೇನಾದರೂ ಆದರೆ, ಚಿನ್ನ ಪಡೆಯುವ ವಿಭಾಗದಲ್ಲಿ ಈತ ಸ್ಥಾನ ಪಡೆಯುತ್ತಾನೆ ಎಂದು ಶೀರ್ಷಿಕೆ ನೀಡಿದ್ದಾರೆ.
ಯುವಕ ಕೆಲಸ ಮಾಡಿದ ರೀತಿಗೆ ಮೆಚ್ಚುಗೆಯ ಸುರಿಮಳೆ ಹರಿಸುತ್ತಿದ್ದಾರೆ. ಹೋಟೆಲ್ ನಲ್ಲಿ ನಾಲ್ಕು ಜನ ಮಾಡುವ ಕೆಲಸವನ್ನು ಈತ ಒಬ್ಬನೇ ಸಲೀಸಾಗಿ ಮಾಡುತ್ತಿದ್ದಾನೆ ಎಂಬ ಕಮೆಂಟ್‌ಗಳು ಬರುತ್ತಿವೆ.
We need to get ‘Waiter Productivity’ recognised as an Olympic sport. This gentleman would be a contender for Gold in that event… pic.twitter.com/2vVw7HCe8A
— anand mahindra (@anandmahindra) January 31, 2023