VIRAL VIDEO| ಪ್ರೇಮಿಗಳ ದಿನದಂದು ಪ್ರಿಯತಮೆಗೆ ಗಿಫ್ಟ್ ನೀಡಲು ಕಾಸ್ಟ್ಲೀ ಡೈಮಂಡ್‌ ನೆಕ್ಲೇಸ್‌ ಕದ್ದ ಇಲಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಇಲಿಗಳು ಸಾಮಾನ್ಯವಾಗಿ ಊಟ-ತಿಂಡಿಯಂತಹ ಪದಾರ್ಥಗಳನ್ನು ಕದ್ದೊಯ್ಯುವುದು ಕಾಮನ್.‌ ಆದರೆ ಇಲ್ಲೊಂದು ಖತರ್ನಾಕ್‌ ಇಲಿ ದುಬಾರಿ ಬೆಲೆಯ ಡೈಮೆಂಟ್‌ ನೆಕ್ಲೇಸ್‌ ಮೇಲೆ ಕಣ್ಣಾಕಿದ್ದು, ರಾತ್ರೋರಾತ್ರಿ ನೆಕ್ಲೇಸ್‌ ಎಗರಿಸಿದೆ. ಜನಪ್ರಿಯ ಆಭರಣ ಅಂಗಡಿಯಲ್ಲಿ ಇಂಥದ್ದೊಂದು ಘಟನೆ ನಡೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್‌ ಆಗಿದೆ.

ಕಾಸರಗೋಡು ಆಭರಣ ಮಳಿಗೆಯಲ್ಲಿ ನೆಕ್ಲೇಸ್‌ಗಳು ಮಾರಾಟಕ್ಕಿವೆ. ಅಂಗಡಿಗೆ ಬರುವ ಗ್ರಾಹಕರು ನೋಡುವಂತೆ ಆಭರಣಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ಇದ್ದಕ್ಕಿದ್ದಂತೆ ಒಂದು ಆಭರಣ ಕಣ್ಮರೆಯಾಗಿದ್ದು ನೋಡಿ ಹುಡುಕಲು ಪ್ರಾರಂಭಿಸಿದರು. ಇಡೀ ಅಂಗಡಿ ಹಡುಕಿದರೂ ಅದರ ಸುಳಿವಿಲ್ಲ. ನಂತರ ಅಂಗಡಿ ಮಾಲೀಕರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ವೇಳೆ ಈ ದೃಶ್ಯ ಕಂಡು ಮಾಲೀಕರು ಸೇರಿದಂತೆ ಸಿಬ್ಬಂದಿ ಬೆಚ್ಚಿಬಿದ್ದರು. ನೆಕ್ಲೇಸ್ ಕಳ್ಳತನವಾಗಿರುವುದು ನಿಜ. ಆದರೆ, ಅದನ್ನು ತೆಗೆದವನನ್ನು ನೋಡಿ ಆಶ್ಚರ್ಯಪಟ್ಟಿದ್ದಾರೆ. ಬೆಲೆ ಬಾಳುವ ನೆಕ್ಲೇಸ್ ಅನ್ನು ಇಲಿ ಕೊಂಡೊಯ್ದಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿದೆ.

ನೆಟ್ಟಿಗರು ವಿಡಿಯೋಗೆ ತಮಾಷೆಯಾಗಿ ಪ್ರತಿಕ್ರಿಯಿಸುತ್ತಿದ್ದಾರೆ. ಪ್ರೇಮಿಗಳ ದಿನ ಹತ್ತಿರವಿದೆ ತಬ್ಬ ಪ್ರಿಯತಮೆಗೆ ಉಡುಗೊರೆ ನೀಡಲು ಈ ಚಿನ್ನಾಭರಣ ಕದ್ದಿರುವುದಾಗಿ ಟ್ವೀಟ್ ಮಾಡುತ್ತಿದ್ದಾರೆ. ಅದೃಷ್ಟವಶಾತ್, ಅಂಗಡಿಯಲ್ಲಿ ಸಿಸಿಟಿವಿ ಕ್ಯಾಮೆರಾ ಇದ್ದು, ಅದರಲ್ಲಿ ಎಲ್ಲ ರೆಕಾರ್ಡ್ ಆಗಿದೆ. ಇಲ್ಲವಾದಲ್ಲಿ ಚಿನ್ನಾಭರಣವನ್ನು ಹೊಡೆದವರು ಯಾರು ಎಂಬುದು ತಿಳಿಯದೇ ನಿಗೂಢವಾಗಿಯೇ ಉಳಿದು ಸಿಬ್ಬಂದಿಗೆ ತೊಂದರೆಯಾಗುತ್ತಿತ್ತು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!