ಹೊಸದಿಗಂತ ಡಿಜಿಟಲ್ ಡೆಸ್ಕ್ :
16 ವರ್ಷದ 11 ನೇ ತರಗತಿ ವಿದ್ಯಾರ್ಥಿನಿಯನ್ನು ಆಕೆಯ “ಇನ್ಸ್ಟಾಗ್ರಾಮ್ ಸ್ನೇಹಿತ” ಹೋಟೆಲ್ಲೊಂದರಲ್ಲಿ ಅತ್ಯಾಚಾರವೆಸಗಿರುವ ಘಟನೆ ಗುರುಗ್ರಾಮದಲ್ಲಿ ನಡೆದಿದೆ.
ಆರೋಪಿಗಳು ಬಾಲಕಿಯ ನಗ್ನ ಚಿತ್ರವನ್ನು ಆಕೆಯ ತಾಯಿಗೆ ಕಳುಹಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ ನಂತರ ವಿಷಯ ಬೆಳಕಿಗೆ ಬಂದಿದೆ.
ಸಂತ್ರಸ್ತೆಯ ತಾಯಿ ನೀಡಿದ ದೂರಿನ ಪ್ರಕಾರ, ಆಕೆಯ ಮಗಳು ಕಳೆದ ವರ್ಷ ಉತ್ತರ ಪ್ರದೇಶ ಮೂಲದವರೊಂದಿಗೆ ಇನ್ಸ್ಟಾಗ್ರಾಮ್ನಲ್ಲಿ ಸ್ನೇಹ ಬೆಳೆಸಿದ್ದಳು ಮತ್ತು ಅವರ ಸ್ನೇಹದ ಸಮಯದಲ್ಲಿ ನಗ್ನ ವೀಡಿಯೊ ಕರೆಯಲ್ಲಿ ತೊಡಗಿದ್ದಳು ಎಂದು ತಾಯಿ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ.
ಆರೋಪಿಯು ತನ್ನ ಮಗಳನ್ನು ಗುರುಗ್ರಾಮ್ನ ಹೋಟೆಲ್ಗೆ ಕರೆದು ಅತ್ಯಾಚಾರ ಎಸಗಿದ್ದಾನೆ ಎಂದು ದೂರಿನಲ್ಲಿ ಹೇಳಿದ್ದಾರೆ.
ಕಳೆದ ವಾರ ಮತ್ತೆರಡು ಬಾರಿ ಆತ ಆಕೆಯನ್ನು ಹೋಟೆಲ್ಗೆ ಕರೆದಿದ್ದ, ಬರದಿದ್ದರೆ ನನ್ನ ಮಗಳ ನಗ್ನ ವಿಡಿಯೋ ಮತ್ತು ಚಿತ್ರಗಳನ್ನು ಆನ್ಲೈನ್ನಲ್ಲಿ ಹಂಚಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದ ಎಂದು ತಿಳಿಸಿದ್ದಾರೆ.
ಮಂಗಳವಾರದಂದು ನನ್ನ ಮಗಳ ನಗ್ನ ಚಿತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ ಮತ್ತು ಅದನ್ನು ನನಗೂ ಕಳುಹಿಸಿದ್ದಾರೆ. ನಾನು ನನ್ನ ಮಗಳನ್ನು ಕೇಳಿದಾಗ ಅವಳು ಸಂಪೂರ್ಣ ವಿಚಾರದ ಬಗ್ಗೆ ಹೇಳಿದ್ದಾಳೆ ಎಂದು ಅವರು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಪ್ರಕರಣ ಸಂಬಂಧ ರಾಜ್ ದಿವೇದಿ ಎಂಬಾತನ ವಿರುದ್ಧ ಪೋಕ್ಸೋ ಕಾಯ್ದೆಯ ಸೆಕ್ಷನ್ 8 (ಲೈಂಗಿಕ ದೌರ್ಜನ್ಯ) ಮತ್ತು 12 (ಲೈಂಗಿಕ ಕಿರುಕುಳ), ಐಪಿಸಿಯ ಸೆಕ್ಷನ್ 506 (ಕ್ರಿಮಿನಲ್ ಬೆದರಿಕೆ), ಮತ್ತು ಐಟಿ ಕಾಯ್ದೆಯ ಸೆಕ್ಷನ್ 67 ಎ ಅಡಿಯಲ್ಲಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.