ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಾಮಾನ್ಯವಾಗಿ ತಮ್ಮ ಆಸೆ ಆಕಾಂಕ್ಷೆಗಳನ್ನು ರಥಕ್ಕೆ ಎಸೆಯುವ ಬಾಳೆಹಣ್ಣಿನ ಮೇಲೆ ಬರೆಯುವುದು ವಾಡಿಕೆ, ಇನ್ನು ಹಲವರು ಮನಸ್ಸಿನಲ್ಲಿ ಆಸೆಯನ್ನು ಹೇಳಿಕೊಂಡು ಸೀದ ರಥಕ್ಕೆ ಬಾಳೆಹಣ್ಣು ಎಸೆದುಬಿಡುತ್ತಾರೆ.
ವಿಜಯಪುರದ ಹಗರಿಬೊಮ್ಮನಹಳ್ಳಿಯ ಚಿಮ್ಮನಹಳ್ಳಿ ದುರ್ಗಾಂಬಿಕೆ ರಥೋತ್ಸವದಲ್ಲಿ ರೈತರು ಬಾಳೆಹಣ್ಣಿನ ಮೇಲೆ ಜನರ ಮನಸ್ಸು ಬದಲಾಗಲಿ, ರೈತರಿಗೆ ಕನ್ಯಾ ಕೊಡಲಿ ಎಂದು ಬರೆದು ಹರಕೆ ಹೊತ್ತು ತೇರಿಗೆ ಬಾಳೆಹಣ್ಣನ್ನು ಎಸೆಯುತ್ತಿದ್ದಾರೆ.
ಎಲ್ಲರಿಗೂ ಮದುವೆಗೆ ಹೆಣ್ಣು ಸಿಗುತ್ತಾರೆ, ಆದರೆ ರೈತರಿಗೆ ಹೆಣ್ಣು ಕೊಡೋದಕ್ಕೆ ಯಾರೂ ಮುಂದಾಗೋದಿಲ್ಲ. ದೊಡ್ಡ ನೌಕರಿ, ಬಂಗಲೆ ಇರುವ ಹುಡುಗನಿಗೆ ಮಾತ್ರ ಮದುವೆಯಾಗಲು ವಧು ಸಿಗುತ್ತಾಳೆ. ಈ ಮನಸ್ಥಿತಿ ಬದಲಾಗಬೇಕು, ರೈತರಿಗೂ ಮದುವೆಗೆ ಹೆಣ್ಣು ಸಿಗಬೇಕು ಎನ್ನುವುದು ಯುವ ರೈತರ ಬೇಡಿಕೆಯಾಗಿದೆ.