ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟಿ ರಿಷಿಕಾ ಸಿಂಗ್ ಎಲ್ಲಿ ಹೋದ್ರು? ಸಾಮಾಜಿಕ ಜಾಲತಾಣದಲ್ಲಿಯೂ ಕಾಣಿಸಿಕೊಳ್ಳದ ರಿಷಿಕಾ ಆರೋಗ್ಯ ಈಗ ಹೇಗಿದೆ?
ರಿಷಿಕಾ ಸಿಂಗ್ ಎರಡು ವರ್ಷದ ಹಿಂದೆ ಭೀಕರ ರಸ್ತೆ ಅಪಘಾತಕ್ಕೆ ತುತ್ತಾಗಿದ್ದರು. ಇದರಿಂದ ಬೆನ್ನುಮೂಳೆಗೆ ಬಲವಾದ ಪೆಟ್ಟುಬಿದ್ದಿತ್ತು. ಮರಕ್ಕೆ ಕಾರು ಡಿಕ್ಕಿ ಹೊಡೆದು, ಕಾರು ನಜ್ಜುಗುಜ್ಜಾಗಿತ್ತು, ಕಾರು ನೋಡಿದ ಯಾರೂ ರಿಷಿಕಾ ಬದುಕಿದ್ದಾರೆ ಎಂದು ನಂಬಲೂ ತಯಾರಿರಲಿಲ್ಲ.
ಇದೀಗ ರಿಷಿಕಾ ತಮ್ಮ ಆರೋಗ್ಯ ಸ್ಥಿತಿ ಬಗ್ಗೆ ಮಾತನಾಡಿದ್ದು, ತಿಂಗಳುಗಳ ಕಾಲ ಬೆಡ್ ಮೇಲೆಯೇ ಇದ್ದೆ, ವೈದ್ಯರ ಸತತ ಪ್ರಯತ್ನ ಹಾಗೂ ನನ್ನ ಸ್ಥೈರ್ಯ, ಕುಟುಂಬದ ಪ್ರೀತಿಯಿಂದ ಇದೀಗ ಚೇತರಿಸಿಕೊಂಡಿದ್ದೇನೆ. ವ್ಹೀಲ್‌ಚೇರ್‌ನಲ್ಲಿ ನಡೆದಾಡುವಷ್ಟು, ಕೋಲುಗಳ ಸಹಾಯದಿಂದ ನಿಲ್ಲುವಷ್ಟು ಶಕ್ತಿ ಬಂದಿದೆ. ದೇವರಿಗೆ, ವೈದ್ಯರಿಗೆ ಧನ್ಯವಾದ ತಿಳಿಸುತ್ತೇನೆ ಎಂದಿದ್ದಾರೆ.
https://www.instagram.com/reel/CoFlEyDg-ej/?utm_source=ig_web_copy_link