ಹೊಸದಿಗಂತ ಡಿಜಿಟಲ್ ಡೆಸ್ಕ್:
ಟೆಕ್ ಕಂಪನಿಗಳಲ್ಲಿ ಉದ್ಯೋಗ ಕಡಿತದ ಸಾಗಾ ಮುಂದುವರಿದಿದೆ. ಇದೀಗ ಈ ಲಿಸ್ಟ್‌ಗೆ ಮತ್ತೊಂದು ಕಂಪನಿ ಸೇರಿಕೊಂಡಿದೆ.
ಪಿಂಟ್ರೆಸ್ಟ್‌ನಲ್ಲಿಯೂ ಉದ್ಯೋಗ ಕಡಿತವಾಗಿದ್ದು, 150 ಮಂದಿ ಕೆಲಸ ಕಳೆದುಕೊಂಡಿದ್ದಾರೆ.
ಸಾಮಾಜಿಕ ಜಾಲತಾಣ ಹಾಗೂ ಇಮೇಜ್ ಶೇರಿಂಗ್ ತಾಣವಾದ ಪಿಂಟ್ರೆಸ್ಟ್ ಶೇ.5ರಷ್ಟು ಉದ್ಯೋಗಿಗಳನ್ನು ವಜಾ ಮಾಡಿದೆ.
ದೀರ್ಘಾವಧಿಯ ತಂತ್ರಗಾರಿಕೆ ಹಾಗೂ ಆದ್ಯತೆಗಳನ್ನು ಗಮನದಲ್ಲಿ ಇಟ್ಟುಕೊಂಡು ಉದ್ಯೋಗಿಗಳನ್ನು ವಜಾ ಮಾಡಲಾಗುತ್ತಿದೆ. ವಜಾಗೊಂಡ ಉದ್ಯೋಗಿಗಳಿಗೆ ಬೇರ್ಪಡಿಕೆಯ ಪ್ಯಾಕೇಜ್ ನೀಡುತ್ತಿದ್ದೇವೆ ಎಂದು ಕಂಪನಿ ಹೇಳಿದೆ.