ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ಕ್ಯೂಟೆಸ್ಟ್ ಕಪಲ್ ವಿಕ್ಕಿ ಕೌಶಲ್ ಹಾಗೂ ಕಟ್ರೀನಾ ದಾಂಪತ್ಯ ಜೀವನದ ಬಗ್ಗೆ ಆಗಾಗ ಸಣ್ಣ ಪುಟ್ಟ ಕಮೆಂಟ್ಗಳು ಬರುತ್ತಲೇ ಇರುತ್ತದೆ.
ಸ್ಟಾರ್ ಹೀರೋಯಿನ್ ಪಟ್ಟ ಹೊತ್ತಿರುವ ಕಟ್ರೀನಾ ವಿಕ್ಕಿ ಕೌಶಲ್ ಅವರನ್ನು ಮದುವೆ ಆಗಿದ್ದು ಹೇಗೆ ಅನ್ನೋದು ಹಲವರ ಪ್ರಶ್ನೆಯಾಗಿದೆ. ಇದೀಗ ಟ್ಯಾಲೆಂಟೆಡ್ ಆಕ್ಟರ್ ವಿಕ್ಕಿ ಕೌಶಲ್ ತಾವು ಕಟ್ರೀನಾಗೆ ತಕ್ಕ ಪತಿ ಅಲ್ಲ ಎಂದು ಹೇಳಿದ್ದಾರೆ.
ಹೌದು, ಸಂದರ್ಶನವೊಂದರಲ್ಲಿ ವಿಕ್ಕಿ ಕೌಶಲ್ ನಾನು ಪರ್ಫೆಕ್ಟ್ ಪತಿ ಅಲ್ಲ, ಪರ್ಫೆಕ್ಟ್ ಮಗ ಅಲ್ಲ, ಪರ್ಫೆಕ್ಟ್ ಸ್ನೇಹಿತನೂ ಅಲ್ಲ, ಆಕ್ಟರ್ ಕೂಡ ಅಲ್ಲ. ಪ್ರತಿ ದಿನ ಪರ್ಫೆಕ್ಟ್ ಆಗುವ ಪ್ರಯತ್ನದಲ್ಲಿದ್ದೇನೆ. ಆದರೆ ಅದಕ್ಕೆ ಹತ್ತಿರವೂ ನಾನಿಲ್ಲ. ಇನ್ನೇನು ಪರ್ಫೆಕ್ಟ್ ಆಗಿ ಬಿಟ್ಟೆ ಎಂದುಕೊಳ್ಳುತ್ತೇನೆ, ಆಗ ತಿಳಿಯುತ್ತದೆ, ನಾನು ಪರ್ಫೆಕ್ಟ್ಗೆ ಹತ್ತಿರವೂ ಇಲ್ಲ ಎಂದು ಹೇಳಿಕೊಂಡಿದ್ದಾರೆ.