ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ನಟಿ ಆಲಿಯಾ ಭಟ್ ತಮ್ಮ ಕರಿಯರ್ ಬಗೆಗಿನ ದೊಡ್ಡ ನಿರ್ಧಾರವೊಂದನ್ನು ಕೈಗೊಂಡಿದ್ದಾರೆ.
ಯಶಸ್ಸಿನ ಉತ್ತುಂಗದಲ್ಲಿರೋ ಆಲಿಯಾ ಚಿತ್ರರಂಗದಿಂದ ಸ್ವಲ್ಪ ಸಮಯದ ಬ್ರೇಕ್ ಪಡೆಯಲಿದ್ದಾರಂತೆ, ಹೌದು, ತಾಯ್ತನದ ಖುಷಿಯನ್ನು ಅನುಭವಿಸಲು ಚಿತ್ರರಂಗ ತೊರೆಯುವ ನಿರ್ಧಾರವನ್ನು ಆಲಿಯಾ ಮಾಡಿದ್ದಾರೆ.
ಮಗಳ ಜೊತೆ ಆಟ ಆಡಬೇಕು, ಅವಳು ದೊಡ್ಡವಳಾಗುವುದನ್ನು ನೋಡಬೇಕು ಹೀಗೆ ಸಾಕಷ್ಟು ಆಸೆಗಳು, ತಾಯ್ತನ ನಿಭಾಯಿಸುವ ದೃಷ್ಟಿಯಿಂದ ಸ್ವಲ್ಪ ಸಮಯಕ್ಕೆ ಆಲಿಯಾ ಬ್ರೇಕ್ ಘೋಷಿಸಿದ್ದಾರೆ. ಸದಾ ಇಂದಿನ ಬಗ್ಗೆ ಮಾತ್ರ ಯೋಚಿಸುವ ಆಲಿಯಾ, ಚಿತ್ರರಂಗ ಸದಾ ನನ್ನನ್ನು ಪ್ರೀತಿಸುತ್ತದೆ, ಮಗಳ ಜೊತೆ ಸಮಯ ಕಳೆಯಲೇಬೇಕು, ಈ ಸಮಯ ಮತ್ತೆ ಬರೋದಿಲ್ಲ ಎಂದು ನಿರ್ಧರಿಸಿದ್ದಾರೆ/.