ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯ ಭಲಾರಾ ಅರಣ್ಯ ಪ್ರದೇಶದಲ್ಲಿ ಜಮ್ಮು–ಕಾಶ್ಮೀರ ಪೊಲೀಸರ ವಿಶೇಷ ಕಾರ್ಯಾಚರಣೆ ತಂಡ ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ ಉಗ್ರರ ಅಡಗು ತಾಣ ಪತ್ತೆಯಾಗಿದ್ದು, ಶಸ್ತ್ರಾಸ್ತ್ರ ಹಾಗೂ ಸಜೀವ ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಗುಪ್ತಚರ ಮಾಹಿತಿಯ ಆಧಾರದ ಮೇಲೆ ಈ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು. ಭಾನುವಾರ ಆರಂಭಗೊಂಡ ಶೋಧದ ವೇಳೆ ಕಾಡಿನ ಒಳಭಾಗದಲ್ಲಿ ಮರೆಮಾಚಲಾಗಿದ್ದ ಅಡಗು ತಾಣ ಪತ್ತೆಯಾಗಿದ್ದು, ಅಲ್ಲಿ ಒಂದು ಎಸ್‌ಎಲ್‌ಆರ್ ರೈಫಲ್, ಎರಡು ಮ್ಯಾಗಜೀನ್‌ಗಳು ಹಾಗೂ 22 ಸುತ್ತಿನ ಸಜೀವ ಗುಂಡುಗಳು ದೊರೆತಿವೆ. ಭದ್ರತಾ ಪಡೆಗಳು ಶಸ್ತ್ರಾಸ್ತ್ರಗಳನ್ನು ತಕ್ಷಣವೇ ವಶಕ್ಕೆ ಪಡೆದು ಪ್ರದೇಶವನ್ನು ತಮ್ಮ ನಿಗ್ರಾಣಿಯಲ್ಲಿರಿಸಿವೆ
ಈ ಕಾರ್ಯಾಚರಣೆಯಿಂದ ದೋಡಾ ಜಿಲ್ಲೆಯಲ್ಲಿ ಭದ್ರತಾ ಸ್ಥಿತಿ ಇನ್ನಷ್ಟು ಬಲಗೊಂಡಿದ್ದು, ಯಾವುದೇ ಸಂಭಾವ್ಯ ಉಗ್ರ ದಾಳಿಯನ್ನು ಮುಂಚಿತವಾಗಿಯೇ ತಡೆಹಿಡಿಯಲು ಇದು ಸಹಾಯಕರವಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

