February 26, 2026
Thursday, February 26, 2026
spot_img

ಎಂಇಎಸ್ ಮುಖಂಡರನ್ನು ಜಿಲ್ಲೆಯಿಂದ ಗಡಿಪಾರು ಮಾಡಿ: ಮಹಾಮೇಳಾವ ವಿರುದ್ದ ಕರವೇ ಆಕ್ರೋಶ

ಹೊಸದಿಗಂತ ವರದಿ ಬೆಳಗಾವಿ:

ರಾಜ್ಯ ಸರಕಾರದ ವಿರುದ್ಧ ಮಹಾಮೇಳಾವ್ ನಡೆಸುವುದಕ್ಕೆ ಮುಂದಾಗಿದ್ದ ಎಂಇಎಸ್ ವಿರುದ್ಧ ಕರವೇ ನಗರದಲ್ಲಿ ತೀವ್ರ ಪ್ರತಿಭಟನೆ ನಡೆಸಿದರು. ‌

ಮರಾಠಾ ಏಕೀಕರಣ ಸಮಿತಿಯ ಎಲ್ಲ ಚಟುವಟಿಕೆಗಳನ್ನು ಜಿಲ್ಲಾಡಳಿತ ಹತ್ತಿಕ್ಕಬೇಕು. ಎಂಇಎಸ್ ಮುಖಂಡರನ್ನು ಜಿಲ್ಲೆಯಿಂದ ಗಡಿಪಾರು ಮಾಡಬೇಕು ಎಂದು ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ ಸರಕಾರವನ್ನು ಆಗ್ರಹಿಸಿದರು.

ಎಂಇಎಸ್ ರ‍್ಯಾಲಿನಡೆಸಲು ಉದ್ದೇಶಿಸಿದ್ದ ಠೀಲಕವಾಡಿ ಪ್ರದೇಶದತ್ತ ಹೋಗಲೆತ್ನಿಸಿದ‌ ಕರವೇ ಕಾರ್ಯಕರಗತರನ್ನು‌ನಗರ ಪೊಲೀಸರು ಬಂಧಿಸಿ ಎಪಿಎಂಸಿ ಠಾಣೆಯತ್ತ ಕರೆದೊಯ್ದರು. ಬೆಳಗಾವಿ ನಗರದಲ್ಲಿ ದಶಕಗಳಿಂದ ಕಿತಾಪತಿ ಹಾಗೂ ಅಶಾಂತಿ ಉಂಟು ಮಾಡಿ‌ ಕರ್ನಾಟಕ‌-ಮಹಾರಾಷ್ಟ್ರ ನಡುವೆ ಇಲ್ಲದ ದ್ವೇಷ ಬೆಳೆಸುವಲ್ಲಿ ಬೆಳಗಾವಿ‌ನ ಗರಕ್ಕೆ ಸೀಮಿತ ಫುಂಡರ ಹಾವಳಿ ಹೆಚ್ಚಾಗಿದ್ದು ಸರಕಾರ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ದೀಪಕ ಗುಡಗನಟ್ಟಿ, ವಾಜೀದ್ ಹಿರೇಕೋಡಿ ಹಾಗೂ ಇತರ ನಾಯಕರನ್ನು‌ ಪೊಲೀಸರು ವಶಕ್ಕೆ‌ ಪಡೆದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !